ನಿರಾಶ್ರಿತರಿಗೆ ಹೋದಿಕೆ ವಿತರಿಸಿ ಮಾದರಿಯಾದ ಕೆ ಎಂ ಪಿ ಕೆ ಟ್ರಸ್ಟ್

Spread the love

ಮೈಸೂರು: ನಮ್ಮಲ್ಲಿ ಬಹಳಷ್ಟು ಮಂದಿ ಕಾರಣಾಂತರಗಳಿಂದ ರೈಲು,ಬಸ್ ನಿಲ್ದಾಣವನ್ನೇ ಆಶ್ರಯತಾಣ ಮಾಡಿಕೊಂಡು‌‌ ಚಳಿ,ಗಾಳಿಯಲ್ಲಿ ನಡುಗುತ್ತಾ ಮಲಗುವುದನ್ನು ಕಾಣುತ್ತೇವೆ.

ಹಾಗೆ ಕಂಡರೂ ಯಾರೂ ಅವರ ನೆರವಿಗೆ ಬರುವುದಿಲ್ಲ.ಆದರೆ ಮೈಸೂರಿನ ಕೆ ಎಂ ಪಿ ಕೆ
ಚಾರಿಟಬಲ್ ಟ್ರಸ್ಟ್ ಚಳಿಗಾಲದಲ್ಲಿ ಇಂತವರಿಗೆ ನೆರವಾಗುತ್ತಾ ಇತರರಿಗೆ ಮಾದರಿಯಾಗಿದ್ದಾರೆ.

ಪ್ರತಿ‌ ವರ್ಷ ಕೆಎಂಪಿಕೆ ಟ್ರಸ್ಟ್ ನವರು ರಸ್ತೆ ಬದಿ ಮಲಗುವ ನಿರಾಶ್ರಿತರಿಗೆ ಹೊದಿಕೆ ವಿತರಿಸುವ ಸೇವೆ
ಮಾಡುತ್ತಿದ್ದು ಈ ಬಾರಿ ಕೂಡಾ ಈ ಕಾರ್ಯವನ್ನು ಮುಂದುವರೆಸಿದ್ದಾರೆ.

ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳು ಭಾನುವಾರ ರಾತ್ರಿ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣ ಹಾಗೂ ಸುತ್ತ ಮತ್ತಲಿನಲ್ಲಿ ಮಲಗಿರುವ ನಿರಾಶಿತರಿಗೆ ಹೊದಿಕೆ ವಿತರಿಸಿ ಅವರ ಆರೋಗ್ಯ ವಿಚಾರಿಸಿದರು.

ಟ್ರಸ್ಟ್ ನ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಅವರ ನೇತೃತ್ವದಲ್ಲಿ ಹೊದಿಕೆ ವಿತರಣೆ ಮಾಡಿ,ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು.

ಈಗಾಗಲೇ ಚಳಿ ಪ್ರಾರಂಭವಾಗಿದ್ದು, ವಾತಾವರಣದಲ್ಲಿನ ಉಷ್ಣಾಂಶ ಕಡಿಮೆಯಾಗಿ, ತಂಡಿ ವಾತಾವರಣ ಕಂಡುಬರುತ್ತಿದೆ,ರಾತ್ರಿಯಾದರೆ ಬಹಳ ಚಳಿ ಇರುತ್ತದೆ.

ಈ ಸಂದರ್ಭದಲ್ಲಿ ದೇಹಕ್ಕೆ ವಿವಿಧ ರೀತಿಯ ತೊಂದರೆಗಳಾಗುತ್ತವೆ,ಅನಾರೋಗ್ಯ ಪೀಡಿತರಾಗಬೇಕಾಗುತಗತದೆ, ಆದ್ದರಿಂದ ಮುಂಜಾಗ್ರತೆ ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂಬುದನ್ನು ನಿರಾಶ್ರಿತರಿಗೆ ಮನದಟ್ಟು ಮಾಡಿಕೊಡಲಾಯಿತು.

ಕೆಎಂಪಿಕೆ ಟ್ರಸ್ಟ್ ಸೇವಾ ಕಾರ್ಯಕ್ಕೆ ರಾಷ್ಟ್ರೀಯ ವಿಶೇಷ ಚೇತನ ಕ್ರೀಡಾಪಟು ಅಲೋಕ್ ಆರ್.ಜೈನ್ ಮಹಾನ್ ಶ್ರೆಯಸ್ , ಬೈರತಿ ಲಿಂಗರಾಜು, ಮಂಜುನಾಥ್, ಸಚಿನ್ ನಾಯಕ್, ಸೇರಿದಂತೆ ಅನೇಕರು ಕೈ ಜೋಡಿಸಿದರು.