ಮದುವೆ ಆಗುವಂತೆ ಒತ್ತಾಯಿಸಿಇನ್ಫೋಸಿಸ್ ಉದ್ಯೋಗಿಗೆ ಯುವಕ ಹಲ್ಲೆ

Spread the love

ಮೈಸೂರು: ಯುವಕನೊಬ್ಬ ಇನ್ಫೋಸಿಸ್ ಉದ್ಯೋಗಿಯ ಮನೆಗೆ ನುಗ್ಗಿ ಮದುವೆ ಆಗುವಂತೆ ಒತ್ತಾಯಿಸಿ,ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ ಘಟನೆ ಮೈಸೂರಿನ ಮೇಟಗಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಈ ಘಟನೆ ಸುಭಾಷ್ ನಗರದಲ್ಲಿ ನಡೆದಿದೆ. ಹಲ್ಲೆ ನಡೆಸಿದ ಯುವಕನ ವಿರುದ್ದ ಇನ್ಫೋಸಿಸ್ ಉದ್ಯೋಗಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದು,
ಎಫ್ಐಆರ್ ದಾಖಲಾಗಿದೆ.

ಬೆಂಗಳೂರಿನ ಕೆಂಗೇರಿಯ ಸುಂಕಲ್ ಪಾಳ್ಯ ನಿವಾಸಿ ಮಧುನಂದನ್ ವಿರುದ್ದ ಪ್ರಕರಣ ದಾಖಲಾಗಿದೆ.

ಇನ್ಫೋಸಿಸ್ ನಲ್ಲಿ ಟೆಕ್ನಿಕಲ್ ಸಪೋರ್ಟ್ ಸ್ಪೆಷಲಿಸ್ಟ್ ಆಗಿ ಕೆಲಸ ಮಾಡುತ್ತಿರುವ ಇಂದು ಎಂಬುವರು ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇಂದು ಹಾಗೂ ಮಧುನಂದನ್ ಅವರ ಮದುವೆಗೆ ಜೂನ್ ತಿಂಗಳಿನಲ್ಲಿ ಮಾತುಕತೆ ಆಗಿತ್ತು.ಕೆಲ ದಿನಗಳ ನಂತರ ಇಂದು ಅವರ ಬಗ್ಗೆ ಸಂಶಯ ಪಡುವುದು,ನೀನು ವರ್ಜಿನ್ನಾ,ಫೋನ್ ಮಾಡಿದ್ರೆ ಯಾಕೆ ರಿಸೀವ್ ಮಾಡಿಲ್ಲ,ಎಲ್ಲಿಗೆ ಹೋಗಿದ್ದೆ ಇವೇ‌ ಮುಂತಾದ ಪ್ರಶ್ನೆಗಳನ್ನ ಹಾಕಿ ಮಧುನಂದನ್ ಅನುಮಾನ ಪಡುತ್ತಿದ್ದ.

ಆತನ ನಡೆಯಿಂದ ನೊಂದ ಇಂದು ತನ್ನ ಮನೆಯವರೊಂದಿಗೆ ಚರ್ಚಿಸಿ ಮದುವೆ ರದ್ದು ಮಾಡಿಕೊಂಡರು. ಇದರಿಂದ ದ್ವೇಷ ಬೆಳೆಸಿಕೊಂಡ ಮಧುನಂದನ್ ತನ್ನ ಅಕ್ಕ ಸರಿತಾ,ಅಕ್ಕನ ಮಗ ಚಿರು,ಭಾವ ಯೋಗೇಶ್ ಜೊತೆ ಮನೆಗೆ ಪ್ರವೇಶಿಸಿ ಇಂದು ಅವರನ್ನು ಮದುವೆ ಆಗುವಂತೆ ಪೀಡಿಸಿದ್ದಾನೆ.

ಆಕೆ ನಿರಾಕರಿಸಿದ್ದಾರೆ‌,ಆಗ ಇಂದು ಮೇಲೆ ಹಲ್ಲೆ ನಡೆಸಿದ್ದಾನೆ.ಅಡ್ಡ ಬಂದ ತಂಗಿ ಮೇಲೂ ಹಲ್ಲೆ ನಡೆಸಿ ರಂಪಾಟ ಮಾಡಿದ್ದಾನೆ.ನನ್ನನ್ನ ಮದುವೆ ಆಗದಿದ್ದರೆ ಯಾರೂ ನಿನ್ನ ಮದುವೆ ಆಗದಂತೆ ಮಾಡುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿದ್ದಾನೆ.

ಹಲ್ಲೆಗೊಳಗಾದ ಇಂದು ಮತ್ತು ಚಿಕಿತ್ಸೆ ಪಡೆದು ನಂತರ ಆತನ ವಿರುದ್ದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.