ಮೈಸೂರು: ಮುಡಾ ಸೈಟ್ ಅಕ್ರಮ ಹಗರಣ ಬಗೆದಷ್ಟು ಬಯಲಾಗುತ್ತಿದ್ದು,ಕೋಟಿ,ಕೋಟಿ ಬೆಲೆ ಬಾಳುವ ನಿವೇಶನಗಳನ್ನು ಕೇವಲ 3,000 ಗೆ ಮಾರಾಟ ಮಾಡಲಾಗಿದ್ದು,ತೀವ್ರ ಚರ್ಚೆಗೆ ಗ್ರಾಸ ಒದಗಿಸಿದೆ.
ಮೈಸೂರಿನಲ್ಲಿ 60*40 ಸೈಟ್‌ಗಳು ಕಡ್ಲೆಪುರಿಗಿಂತಲೂ ಕಡೆಯಾಗಿಬಿಟ್ಟಿದೆ. ಮೂರು ಸಾವಿರಕ್ಕೆ ಒಂದರಂತೆ ಸುಮಾರು 23 ಸೈಟ್‌ಗಳನ್ನ ರಿಯಲ್ ಎಸ್ಟೇಟ್ ಉದ್ಯಮಿಗೆ ಮುಡಾ ಬರೆದುಕೊಟ್ಟಿದೆ.
ಮುಡಾ ಆಯುಕ್ತ ದಿನೇಶ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಬಡಾವಣೆ ಮಂಜುನಾಥ್‌ನಿಂದ ಮಹಾ ಭೂಗಳ್ಳತನ ನಡೆದಿರುವ ಆರೋಪ ಕೇಳಿಬಂದಿದೆ.
5 ದಿನದಲ್ಲಿ ಪ್ರೋತ್ಸಾಹದಾಯಕ ಯೋಜನೆ ಹೆಸರಿನಲ್ಲಿ ಒಂದು ಸೈಟ್‌ಗೆ 3 ಸಾವಿರದಂತೆ 23 ಸೈಟ್‌ಗಳನ್ನು ಉದ್ಯಮಿ ಮಂಜುನಾಥ್‌ಗೆ ಮುಡಾ ರಿಜಿಸ್ಟೇಷನ್ ಮಾಡಿಕೊಟ್ಟಿದೆ.
ಕ್ರಯ ಪತ್ರದಲ್ಲಿ ಮಂಜುನಾಥ್ ಯಾವ ಜಾಗ ಕಳೆದುಕೊಂಡಿದ್ದಾರೆ ಎಂಬ ಮಾಹಿತಿಯೇ ಇಲ್ಲ. ಸುಮ್ಮನೆ ಪ್ರೋತ್ಸಾಹದಾಯಕ ಎಂದು ನಮೂದಿಸಿ ಸೈಟ್‌ಗಳನ್ನು ರಿಜಿಸ್ಟರ್ ಮಾಡಲಾಗಿದೆ.
ಎರಡೆರೆಡು ದಿನಗಳ ಅಂತರದಲ್ಲಿ ಒಟ್ಟು 6 ದಿನದಲ್ಲಿ ಪ್ರಾಧಿಕಾರಕ್ಕೆ ಸೇರಿದ ಎಲ್ಲಾ 23 ಸೈಟಗಳು ಉದ್ಯಮಿ ಮಂಜುನಾಥ್ ಹೆಸರಿಗೆ ರಿಜಿಸ್ಟರ್ ಮಾಡಲಾಗಿದೆ.
ಕೇವಲ 600 ರೂಪಾಯಿ ಶುಲ್ಕ ಕಟ್ಟಿಸಿಕೊಂಡು ಸೈಟ್ ಮಾರಾಟ ಮಾಡಲಾಗಿದೆ. ಇದರಿಂದ ಸರ್ಕಾರಕ್ಕೆ ಪ್ರತಿ ನಿವೇಶನಕ್ಕೆ ಕನಿಷ್ಟ 97 ಲಕ್ಷ ನಷ್ಟ ಆಗಿದೆ.
5 ಲಕ್ಷ ಶುಲ್ಕ ಪಾವತಿ ಸ್ಥಳದಲ್ಲಿ ಕೇವಲ 600 ರೂಪಾಯಿ ಪಾವತಿಯಾಗಿದೆ. ಉಪ ನೋಂದಣಾಧಿಕಾರಿ ಶಾಮಿಲಿನಿಂದ ಭಾರಿ ಅಕ್ರಮ ಶಂಕೆ ವ್ಯಕ್ತವಾಗಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಎನ್.ಮಂಜುನಾಥ್‌ಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ಬರೆದುಕೊಟ್ಟಿರುವ ನಿವೇಶನಗಳ ವಿವರ
5.04.2023 ರಂದು 6040 ಅಳತೆಯ ಮೂರು ನಿವೇಶನ. 6.04.2023 ರಂದು 6040 ಅಳತೆಯ ಮೂರು ನಿವೇಶನ.
18.04.2023ರಂದು 6040 ಅಳತೆಯ 8 ನಿವೇಶನ. 19.04.2023 ರಂದು 6040 ಅಳತೆಯ 9 ನಿವೇಶನ ಸೇರಿ ಒಟ್ಟು
23 ನಿವೇಶನಗಳು ರಿಜಿಸ್ಟರ್ ಮಾಡಿಕೊಡಲಾಗಿದೆ.