ವಿವಿಧ ಅಭಿವೃಧ್ದಿ ಕಾಮಗಾರಿಗೆ ಶ್ರೀವತ್ಸ ಚಾಲನೆ

ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರು ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಗುರುವಾರ ಬೆಳಗ್ಗೆ ಚಾಮುಂಡಿಬೆಟ್ಟದ ರಸ್ತೆಯಲ್ಲಿರುವ ವೀರ ಮಡಿವಾಳ ದೋಭಿ ಘಾಟ್‌ನಲ್ಲಿ ಶಾಸಕರ ಅನುದಾನದಲ್ಲಿ ಮಡಿವಾಳ ಸಮಾಜದ ಅನುಕೂಲಕ್ಕಾಗಿ ಶೆಲ್ಟರ್ ಅಳವಡಿಸಿ ಹೊಸದಾಗಿ ಕಟ್ಟಿಗಳನ್ನು ನಿರ್ಮಿಸಲು ೧೦ ಲಕ್ಷ ರೂಗಳ ಕಾಮಗಾರಿಗೆ ಚಾಲನೆ ನೀಡಿದರು.

ನಂತರ ವಿದ್ಯಾರಣ್ಯಪುರಂನಲ್ಲಿ ೫೦ ಲಕ್ಷ ವೆಚ್ಚದ ೨ ಮತ್ತು ೪ನೇ ರಸ್ತೆಯ ಅಡ್ಡರಸ್ತೆ ಅಭಿವೃದ್ದಿಗೆ ಮತ್ತು ಸುಮಾರು ೧.೫ ಕೋಟಿ ವೆಚ್ಚದ ರಾಮಾನುಜ ೯ನೇ ಮತ್ತು ೧೦ನೇ ಅಡ್ಡರಸ್ತೆ ಹಾಗೂ ಬಿಬಿ ಗಾರ್ಡನ್ ರಸ್ತೆ ಅಭಿವೃದ್ದಿ, ರಾಮಾನುಜ ಮುಖ್ಯರಸ್ತೆ(ಕಂಸಾಳೆ ಮಹದೇವಯ್ಯ ವೃತ್ತದಿಂದ ರಾಮಾನುಜ ೮ನೇ ಅಡ್ಡರಸ್ತೆರವರೆಗೆ)
ಮರು ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು.

ಆನಂತರ ನಂ ೫೨ರ ವ್ಯಾಪ್ತಿಯಲ್ಲಿ ೨.೧೦ ಲಕ್ಷ ವೆಚ್ಚದ ವಸಂತ್ ಮಹಲ್ ಆವರಣದಲ್ಲಿರುವ ಡಯಟ್ ಸಂಸ್ಥೆಗೆ ಹಾಲಿ ಇರುವ ಮೇಲ್ಪಟ್ಟ ಜಲ ಸಂಗ್ರಹಗಾರದಿಂದ ಹೆಚ್.ಡಿ.ಪಿ.ಇ ಕೊಳವೆ ಮಾರ್ಗದ ಮೂಲಕ ನೀರು ಸರಬರಾಜು ಮಾಡುವ ಕಾಮಗಾರಿಗೆ ಮತ್ತು ವಾರ್ಡ್ ನಂ.೫೦ರ ವ್ಯಾಪ್ತಿಯಲ್ಲಿ ೧೮.೧೦ ಲಕ್ಷ ವೆಚ್ಚದ ಸುಣ್ಣದಕೇರಿ ೮ನೇ ಕ್ರಾಸ್ ನಲ್ಲಿರುವ ಮೈಸೂರು ಮಹಾನಗರ ಪಾಲಿಕೆಯ ವಸತಿ ಗೃಹ ಸಂ.೨,೩,೪೩,೪೪,೪೫ ಹಾಗೂ ವಾರ್ಡ್ ನಂ ೪೯ರ ವ್ಯಾಪ್ತಿಯ ಬಸವೇಶ್ವರ ೩ನೇ ಅಡ್ಡರಸ್ತೆಯಲ್ಲಿ ವಸತಿ ಗೃಹ ಸಂ.೨೧೩೨ರ ದುರಸ್ಥಿ ಕಾಮಗಾರಿಗಳಿಗೆ ಶ್ರೀವತ್ಸ ಚಾಲನೆ ನೀಡಿದರು.

ಈ ವೇಳೆ ನಗರ ಪಾಲಿಕೆ ಮಾಜಿ ಸದಸ್ಯರಾದ ಛಾಯಾದೇವಿ ಬಿ.ವಿ.ಮಂಜುನಾಥ್,
ಜಗದೀಶ್ ವಾರ್ಡ್ ಅಧ್ಯಕ್ಷರಾದ ಹೊಯ್ಸಳ, ಆಟೋ ಮಂಜು, ಶಿವಪ್ರಸಾದ್, ಮಂಜುನಾಥ್ ಹಾಗೂ ವಾರ್ಡಿನ ಪ್ರಮುಖರಾದ ಎನ್. ಪ್ರದೀಪ್ ಕುಮಾರ್ ಬಾಲಕೃಷ್ಣ,ನಿಶಾಂತ್,ಕಿಶೋರ್, ಗೋಕುಲ್ ಗೋವರ್ಧನ್, ಪ್ರಸನ್ನ, ಚಂದ್ರಶೇಖರ್, ಕಿಶೋರ್ ಜೈನ್,ನಂದೀಶ, ಜೋಗಪ್ಪ, ಕೃಷ್ಣನಾಯಕ, ಅನಿಲ್ ಮತ್ತಿತರರು ಹಾಜರಿದ್ದರು.