ಮೈಸೂರು: ಮೈಸೂರು ದಸರಾ ವಸ್ತುಪ್ರದರ್ಶನದ ಪಿ. ಕಾಳಿಂಗರಾವ್ ಗಾನಮಂಟಪದಲ್ಲಿ ಚಾಮರಾಜನಗರದ ಶ್ರೀ ಶಾರದ ನೃತ್ಯಾಲಯದವರು ನಡೆಸಿಕೊಟ್ಟ ಭರತನಾಟ್ಯ ನೃತ್ಯವೈಭವ ಎಲ್ಲರ ಮನ ಸೂರೆಗೊಂಡಿತು.

ಈ ಪ್ರದರ್ಶನವನ್ನ ವಿದ್ವಾನ್ ಮಹೇಶ್ ವಿ ಮತ್ತು ತಂಡ ನಡೆಸಿಕೊಟ್ಟಿತು.
ಬಸವಣ್ಣನವರ ವಚನ ಆಧಾರಿತ ನೃತ್ಯ ಕರ್ನಾಟಕ ಸಂಭ್ರಮ, ಕೃಷ್ಣಲೀಲಾ ಹಾಗೂ ಮಹಿಷಮರ್ಧಿನಿ, ಶಬರಿಮಲೆ ಸ್ವಾಮಿ ಅಯ್ಯಪ್ಪ ಕುರಿತಾದ ಹರಿವರಾಸನಂ ನೃತ್ಯಗಳನ್ನ ನಾಟ್ಯ ಶಾಲಾ ಮಕ್ಕಳು ಪ್ರದರ್ಶಿಸಿದರು.
ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರಘುರಾಜೇ ಅರಸ್ ಅವರು ಪ್ರದರ್ಶನ ನಡೆಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಿದರು
ಈ ಸಂಧರ್ಭದಲ್ಲಿ ಸಾಂಸ್ಕೃತಿಕ ಸಮಿತಿ ಉಪಾಧ್ಯಕ್ಷ ರಾಜೇಶ್ ಸಿ ಗೌಡ, ಚಂದ್ರಕಲಾ ನಿರೂಪಕ ಅಜಯ್ ಶಾಸ್ತ್ರಿ, ಈಶ್ವರ್ ಮತ್ತಿತರರು ಹಾಜರಿದ್ದರು,