ಮೈಸೂರು: ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಪಿ. ಕಾಳಿಂಗರಾವ್ ಗಾನಮಂಟಪದಲ್ಲಿ ಮಿಮಿಕ್ರಿ ಹಾಸ್ಯೋತ್ಸವ ಕಲೋತ್ಸವ ಕಾರ್ಯಕ್ರಮ ಎಲ್ಲರ ಮನ ರಂಜಿಸಿತು.

ಜನಪ್ರಿಯ ಕಲಾವಿದ ಮಿಮಿಕ್ರಿ ಗೋಪಿ ಮಾತನಾಡಿ ಹೆಣ್ಣುಮಕ್ಕಳೇ ಸ್ಟ್ರಾಂಗು ಗುರು, ಗಂಡ್ ಮಕ್ಕಳು ಈಗೀಗ ರಾಂಗು ಗುರು ಎಂದು ಪ್ರಾಸ್ತಾಪಿಸುತ್ತಿದ್ದಂತೆ ಜನ ಖುಷಿ ಪಟ್ಟರು.
ಇತ್ತೀಚಿನ ದಿನಗಳಲ್ಲಿ ಪುರುಷರು ಸಾಧನೆ, ಸಂಪಾದನೆ, ದುಡಿಯುವ ಜವಬ್ದಾರಿ ಮರೆತು, ಅತಿಯಾಸೆಗೆ ಜೂಜು ಮೋಜು ಮತ್ತು ವ್ಯಸನದ ಅಮಲಿಗೆ ಬಲಿಯಾಗುತ್ತಿದ್ದಾರೆ ಎಂದು ಬೇಸರಪಟ್ಟರು.
ಯಾವ ವೃತ್ತ ನೋಡಿದರೂ ಮತ್ತೆ ಹುಟ್ಟಿ ಬಾ ಗೆಳೆಯ ಎಂದು ಯುವಕರ ಶ್ರದ್ದಾಂಜಲಿ ಫ್ಲೆಕ್ಸ್ ರಾರಾಜಿಸುತ್ತಿದೆ, ಪೋಷಕರಿಗೆ ಕಣ್ಣೀರು ಹಾಕಿಸಿ ಹೋದವರಲ್ಲಿ ಯುವಕರೇ ಹೆಚ್ಚು. ಆದರೆ ಯುವತಿಯರು ಹಾಗಲ್ಲ ಬೆಳಗಿನ ಜಾವವೇ ಸ್ವಚ್ಚವಾಗಿ ಮನೆಗೆಲಸ ಮಾಡಿ, ಮನೆಯವರಿಗೆಲ್ಲಾ ಅಡುಗೆ ಊಟೋಪಚಾರ ಕೊಟ್ಟು, ದೀಪ ಬೆಳಗುತ್ತಾ ಮನೆ ಕಾಪಾಡುತ್ತಾರೆ ಹೆಣ್ಣು ಮಕ್ಕಳೇ ಸ್ಟ್ರಾಂಗು ಗುರು ಎಂದು ನಗುವಿನ ಚಟಾಕಿ ಹಾರಿಸಿದರು.
ಯುವಕರಿಗೆ ಆರೋಗ್ಯ ಮತ್ತು ಭವಿಷ್ಯದ ಕುಟುಂಬ ನಿರ್ವಹಣೆ ಜವಬ್ದಾರಿ ಸಂದೇಶ ಸಾರಿದರು.ಆಗ ಚಪ್ಪಾಳೆಯ ಸುರಿಮಳೆ ಸುರಿಯಿತು.
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಅವರು ಕಲಾವಿದರನ್ನ ಸನ್ಮಾನಿಸಿ ಪ್ರಮಾಣ ಪತ್ರ ವಿತರಿಸಿದರು.
ನಂತರ ಮಾತನಾಡಿದ ಅವರು ಪ್ರತಿಯೊಂದು ಜೀವಕ್ಕೂ ಆರೋಗ್ಯ ಬಹಳ ಮುಖ್ಯ, ದುಡಿಮೆಯ ಒತ್ತಡದ ಬದುಕಿನಲ್ಲಿ ನೆಮ್ಮದಿ, ಆರೋಗ್ಯ ಕಾಪಾಡಿಕೊಳ್ಳದೇ ದೇಹ ಹದಗೆಡಿಸಿಕೊಂಡು ಔಷಧಿ ವಿಮೆ ಲ್ಯಾಬ್ ಟೆಸ್ಟ್ ಎಂದು ದಾರಿ ಹಿಡಿಯುವ ಬದಲು, ಪ್ರತಿದಿನ ಧ್ಯಾನ, ಸಂಗೀತ, ಕ್ರೀಡೆ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಪ್ರತಿಯೊಬ್ಬರು ಹಿರಿಯರು ಮಕ್ಕಳೊಂದಿಗೆ ಸಂಸಾರಕ್ಕೆ ಸಮಯ ನಿಗಧಿಪಡಿಸಿಕೊಳ್ಳಬೇಕು, ಮಧುಮೇಹ ರಕ್ತದೊತ್ತಡ ಹತೋಟಿಗೆ ಬರಲು ನಗು ಸಂತೋಷ ಬಹಳ ಮುಖ್ಯ, ಹಾಸ್ಯ ಕಾಲಾವಿದರಿಗೆ ನಮ್ಮ ಆರೋಗ್ಯವನ್ನ ಮಾನಸಿಕವಾಗಿ ಗುಣಪಡಿಸುವ ಶಕ್ತಿಯಿದೆ ಎಂದು ಹೇಳಿದರು.
ಮೆಲ್ಲಹಳ್ಳಿ ರಾಜೇಶ್. ಸಿ ಗೌಡ ನೇತೃತ್ವದಲ್ಲಿ ಮಿಮಿಕ್ರಿ ಹಾಸ್ಯೋತ್ಸವ ಕಲೋತ್ಸವ ಕಾರ್ಯಕ್ರಮ ನಡೆಯಿತು.

ಮಿಮಿಕ್ರಿ ಗೋಪಿ, ಡಿಂಗ್ರಿ ನಾಗರಾಜ್, ರೇಖಾ ದಾಸ್, ಸಿಲ್ಲಿಲಲ್ಲಿ ಗೌಡ್ರು, ಜ್ಯೂನಿಯರ್ ಮಾಲಾಶ್ರೀ (ಮಂಜುಳ), ನಿರೂಪಕರಾದ ಶಿವಮೊಗ್ಗ ಭಾಸ್ಕರ್, ಅಜಯ್ ಶಾಸ್ತ್ರಿ, ಜ್ಯೂನಿಯರ್ ರಕ್ಷಿತಾ (ಲತಾ), ಜ್ಯೂನಿಯರ್ ರ್ವಿಷ್ಣುವರ್ಧನ್ (ಲಕ್ಷ್ಮಣ್), ಜ್ಯೂನಿಯರ್ ಅಂಬರೀಶ್ (ಸುರೇಶ್), ಜ್ಯೂನಿಯರ್ ಶಂಕರನಾಗ್, ವಿದ್ಯಶ್ರೀ, ಅಕ್ಷತಾ, ಅರ್ಪಿತಾ, ವರ್ಷನಂದಿನಿ, ಶಿಲ್ಪಾ, ಪ್ರಶಾಂತ್, ಅಭಿಲಾಷ್, ಐಶ್ವರ್ಯ ಮತ್ತು ಸಂಜನಾ ಕಾರ್ಯಕ್ರಮ ನಡೆಸಿಕೊಟ್ಟರು.
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಕೆ. ರುದ್ರೇಶ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರಘುರಾಜೇ ಅರಸ್, ಕಾರ್ಯಾಧ್ಯಕ್ಷ ಮಲ್ಲೇಶ್, ಉಪಾಧ್ಯಕ್ಷರುಗಳಾದ ಸಯ್ಯದ್ ಅಶ್ರತುಲ್ಲಾ, ಗಯಾಜ್ ಅಹಮದ್, ಮಲ್ಲಿಕಾರ್ಜುನ ಮಲ್ಲಿಕ್, ರಾಜೇಶ್ ಸಿ ಗೌಡ, ಫಾಸಿಲ್ ಖಾನ್, ಫೈರೋಜ್ ಖಾನ್, ಪದ್ಮಾನಾಭನ್ ಗುಂಡಾ, ಮಹೇಂದ್ರ ಕಾಗಿನಲೆ, ರಂಗಸ್ವಾಮಿ ಪಾಪು, ಸದಸ್ಯರುಗಳಾದ ಮಹೇಶ್, ಚಂದ್ರಕಲಾ, ಕೋಮಲಾ, ವಿಜಯಲಕ್ಷ್ಮಿ ಮತ್ತಿತರರು ಹಾಜರಿದ್ದರು.