ಮೈಸೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಅವರ 76 ನೇ ಜನ್ಮದಿನೋತ್ಸವ ಪ್ರಯುಕ್ತ ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ ವತಿಯಿಂದ ಸೇವಾ ಕಾರ್ಯ ಹಮ್ಮಿಕೊಳ್ಳಲಾಯಿತು.
ನಗರದ ಶ್ರೀರಾಂಪುರದಲ್ಲಿರುವ ಬೆಳಕು ವಾತ್ಸಲ್ಯದಾಮದ ಹಿರಿಯ ನಾಗರಿಕರಿಗೆ ಸೀರೆ , ಹಣ್ಣು ಹಂಪಲು ಹಾಗೂ ಗೃಹ ಉಪಯೋಗಿ ವಸ್ತುಗಳನ್ನು ನೀಡುವ ಮೂಲಕ ಪರಮಪೂಜ್ಯ ಡಾ. ವೀರೇಂದ್ರ ಹೆಗಡೆ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಜೆಡಿಎಸ್ ಕಾರ್ಯದಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ ಅವರು,ಐವತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಧರ್ಮಸ್ಥಳ ಶ್ರೀ ಕ್ಷೇತ್ರದಲ್ಲಿ ಧರ್ಮಾಧಿಕಾರಿಯಾಗಿರುವ ಡಾ. ಡಿ ವೀರೇಂದ್ರ ಹೆಗ್ಗಡೆ ತಮ್ಮ ಭಕ್ತಿ, ಧರ್ಮಸೇವೆ ಮತ್ತು ಸಮಾಜಸೇವೆಗಳಿಂದ ಜನಜನಿತವಾಗಿದ್ದಾರೆ ಎಂದು ಹೇಳಿದರು.
ಶ್ರೀ ಕ್ಷೇತ್ರಕ್ಕೆ ಒಂದು ಭವ್ಯ ಕಳೆ ಮತ್ತು ಗೌರವ ತಂದುಕೊಟ್ಟ ಕೀರ್ತಿ ಅವರದ್ದು.
ಧರ್ಮಸ್ಥಳದ ಮಂಜುನಾಥನ ದರ್ಶನ ಮಾಡದ ಕನ್ನಡಿಗರು ಯಾರೂ ಇಲ್ಲ ಎಂದರೆ ಅತಿಶಯೋಕ್ತಿ ಎನಿಸಲಾರದು.
ಬಹುತೇಕ ಭಕ್ತರಿಗೆ ಧರ್ಮಸ್ಥಳದ ಮಂಜುನಾಥ ಎಂದರೆ ಗಾಢವಾದ ಭಕ್ತಿ ಮತ್ತು ನಂಬಿಕೆ. ಹಾಗೆಯೇ, ಧರ್ಮಾಧಿಕಾರಿ ವೀರಂದ್ರ ಹೆಗ್ಗಡೆ ಎಂದರೂ ಅಷ್ಟೇ ಗೌರವ,ಅವರು ಸಮುದಾಯ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಆರೋಗ್ಯ, ಶಿಕ್ಷಣ ಮತ್ತು ಸಂಸ್ಕೃತಿಕ ಕ್ಷೇತ್ರದಲ್ಲಿ ಅವರು ಮಾಡುತ್ತಿರುವ ಸೇವೆ ಶ್ರೇಷ್ಠ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ವಕೀಲರು, ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷರಾದ ಸಿ ಕೆ ರುದ್ರಮೂರ್ತಿ, ಬೆಳಕು ವಾತ್ಸಲ್ಯದಾಮದ ಮಂಗಳ, ಗ್ಯಾರೇಜ್ ಸ್ವಾಮಿ, ಸುಬ್ರಹ್ಮಣ್ಯ, ವೀರಭದ್ರ ಸ್ವಾಮಿ, ಯಶ್ವಂತ್ ಕುಮಾರ್, ರಾಜೇಶ್ ಕುಮಾರ್, ಮಹೇಶ್, ಎಸ್ ಪಿ ಅಕ್ಷಯ್ ಪಿಯಾದರ್ಶನ , ಹರ್ಷಿತ್ ಎಸ್ ನಾಗೇಶ್, ಪೂರ್ವಿಕ,ಅಭಿ, ಚಂದನ್, ರಾಮ್ ಕುಮಾರ್, ಜೈರಾಮ್ ಮತ್ತಿತರರು ಹಾಜರಿದ್ದರು.