ಶ್ರೀ ವೈಷ್ಣವ ಸಮಾವೇಶಕ್ಕೆ ವಿಪ್ರರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ: ವಿಕ್ರಂ ಅಯ್ಯಂಗಾರ್

ಮೈಸೂರು:ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಆವರಣದಲ್ಲಿ ನವೆಂಬರ್ 24ರಂದು ರಾಮಾನುಜ ವಿಶ್ವವಿಜಯೋತ್ಸವ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಪ್ರರು ಪಾಲ್ಗೊಳ್ಳುವಂತೆ
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಕರೆ ನೀಡಿದ್ದಾರೆ.

ಸಮುದಾಯದ ಏಳಿಗೆಗಾಗಿ ಸಂಘಟನಾ ಚರ್ಚೆಯನ್ನ ಸಮಾವೇಶದ
ಗೋಷ್ಠಿಗಳಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿಪ್ರ ಸಮುದಾಯದವರು ಸಮಾವೇಶಕ್ಕೆ ಭಾಗವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಅಖಿಲ ಕರ್ನಾಟಕ ಶ್ರೀ ವೈಷ್ಣವ ಮಹಾಸಭಾದಿಂದ ಶ್ರೀ ಯದುಗಿರಿ ಯತಿರಾಜ ರಾಮಾನುಜಾ ಜಿಯರ್ ಶ್ರೀಗಳ ದಿವ್ಯಸಾನಿಧ್ಯಸಲ್ಲಿ ಸಮಾವೇಶ ನಡೆಯುತ್ತಿದ್ದು ಶ್ರೀವೈಷ್ಣವ ಸಮಾಜದ ಯಾವುದೇ ಒಳಪಂಗಡಗಳು ಇದ್ದರೂ ಅವೆಲ್ಲವನ್ನು ಒಂದೇ ವೇದಿಕೆಯಡಿ ತಂದು ಅವರ ಶೈಕ್ಷಣಿಕ ಔದ್ಯಮಿಕ ಪ್ರಗತಿಗೆ ಮುನ್ನುಡಿ ಬರೆಯಲಿದೆ.

ಶ್ರೀವೈಷ್ಣವ ಜನಾಂಗದ ಯಾವುದೇ ಸಮಸ್ಯೆಗಳಿದ್ದರೂ ಸರ್ಕಾರದ ಗಮನಕ್ಕೆ ತರುವುದು ಸೂಕ್ತ ಪರಿಹಾರ ಕಂಡುಕೊಳ್ಳುವುದು ಇದರ ಉದ್ದೇಶವಾಗಿದೆ ಎಂದು ವಿಕ್ರಮ್ ಅಯ್ಯಂಗಾರ್ ಹೇಳಿದ್ದಾರೆ.

ಭಾನುವಾರ ಬೆಳಗ್ಗೆ ನಡೆಯುವ ಬೃಹತ್ ಧಾರ್ಮಿಕ ಸಮಾರಂಭದಲ್ಲಿ 108 ಶಂಖಗಳಿಂದ ಏಕಕಾಲಕ್ಕೆ ಶಂಖನಾದದ ಮೂಲಕ ಕಾರ್ಯಕ್ರಮ
ಉದ್ಘಾಟನೆಯಾಗಲಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಮೈಸೂರಿನಿಂದ 2000ಕ್ಕೂ ಹೆಚ್ಚು ಹಾಗೂ ರಾಜ್ಯದ ನಾನಾ ಭಾಗಗಳಿಂದ ಸುಮಾರು 1 ಲಕ್ಷಕ್ಕೂ ಅಧಿಕ ಸಂಘಟಕರು ಆಗಮಿಸಲಿದ್ದು ಅವರಿಗೆ ಸಂಘ ಸಂಸ್ಥೆಗಳ ಮೂಲಕ ಬಸ್ಸುಗಳ ವ್ಯವಸ್ಥೆ ಮತ್ತು ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.