ಮೈಸೂರು: ಪತ್ರಿಕೋದ್ಯಮ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸತ್ತಿರುವ ರಕ್ತದಾನಿ ಮಂಜು ಅವರು
ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮೈಸೂರು ಜಿಲ್ಲೆ, ಹುಣಸೂರ ತಾಲೂಕು ಚೊಳೇನಹಳ್ಳಿ ಗ್ರಾಮದ ರಕ್ತದಾನಿ ಮಂಜು ಅವರು ಕರುನಾಡ ಸೇನಾನಿಗಳ ವೇದಿಕೆಯಲ್ಲಿ ಮೈಸೂರು ಜಿಲ್ಲಾ ಅಧ್ಯಕ್ಷರಾಗಿ ಕನ್ನಡಪರ ಹೋರಾಟಗಾರರಾಗಿ ಹಲವಾರು ಸೇವೆಗಳನ್ನ ಸಲ್ಲಿಸಿದ್ದಾರೆ.
ಒಂದು ಹೆಜ್ಜೆ ರಕ್ತ ದಾನಿಗಳ ಬಳಗವನ್ನು ಕಟ್ಟಿ ನಾಲ್ಕು ವರ್ಷಗಳಿಂದ ಸುಮಾರು 2680 ಜನರಿಗೆ ರಕ್ತದಾನ ಮಾಡಿಸಿದ್ದಾರೆ,ಜತೆಗೆ ಸ್ವತಃ 33 ಬಾರಿ ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸುವ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ.
ಪತ್ರಿಕೋದ್ಯಮದಲ್ಲೂ ಇವರು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇವರ ಸೇವೆಯನ್ನು ಗುರುತಿಸಿದ ಕಲಾಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಆಸ್ಕರ್ ಕೃಷ್ಣ ಅವರು ರಕ್ತದಾನಿ ಮಂಜು ಅವರಿಗೆ ಪ್ರತಿಷ್ಠಾನವು ಕೊಡಮಾಡುವ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ-2024 ಕ್ಕೆ ಆಯ್ಕೆ ಮಾಡಿದ್ದಾರೆ.

ಈ ಪ್ರಶಸ್ತಿಯನ್ನು ನವೆಂಬರ್ 29 ರಂದು ಬೆಂಗಳೂರಿನ ಕಲಾ ಗ್ರಾಮ ಸಾಂಸ್ಕೃತಿಕ ಸಮುಚ್ಛಯದಲ್ಲಿ ಪ್ರದಾನ ಮಾಡಲಾಗುವುದೆಂದು ಆಸ್ಕರ್ ಕೃಷ್ಣ ತಿಳಿಸಿದ್ದಾರೆ.
