ಮೈಸೂರು: ಮೈಸೂರಿನ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಶ್ರೀ ಭಕ್ತ ಕನಕದಾಸರ 537ನೇ ಜಯಂತ್ಯೋತ್ಸವದ ಅಂಗವಾಗಿ ಶ್ರೀ ಕನಕ ಸೇವ ರತ್ನ ಪ್ರಶಸ್ತಿಯನ್ನು ಸಾಧಕರಿಗೆ ನೀಡಿ ಗೌರವಿಸಲಾಯಿತು.
ಹಿರಿಯ ಸಮಾಜ ಸೇವಕರಾದ ಡಾ. ಬಿ. ಆರ್. ನಟರಾಜ್ ಜೋಯಿಸ್ ಅವರಿಗೆ ಶ್ರೀ ಕನಕ ಸೇವ ರತ್ನ ಪ್ರಶಸ್ತಿಯನ್ನು ನೀಡಿ ಆತ್ಮೀಯವಾಗಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಮುಖಂಡರುಗಳಾದ ವೀರಭದ್ರ ಸ್ವಾಮಿ, ಶ್ರೀಧರ್, ಎಸ್. ಪಿ.ಅಕ್ಷಯಪ್ರಿಯದರ್ಶನ ಹಾಜರಿದ್ದರು.
