ಕಂಸಾಳೆ ಮಹದೇವಯ್ಯ ವೃತ್ತ ಸರಿಪಡಿಸಲು ತೇಜಸ್ವಿ ಮನವಿ

ಮೈಸೂರು: ಮೈಸೂರಿನ ಕೃಷ್ಣ ರಾಜ ಕ್ಷೇತ್ರದಲ್ಲಿರುವ ಕಂಸಾಳೆ ಮಹದೇವಯ್ಯ ವೃತ್ತ ಅನೇಕ ತಿಂಗಳಿಂದ ಶಿಥಿಲವಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿಲ್ಲ ಎಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ವೃತ್ತದ ಕಲ್ಲುಗಳು ಉರುಳಿ ಬಿದ್ದರೂ ಕೇಳುವವರೆ ಇಲ್ಲದಂತಾಗಿದೆ, ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಅವರು‌ ಖಂಡಿಸಿದ್ದಾರೆ.

ಕೂಡಲೇ ಸಂಬಂಧಪಟ್ಟ ಇಲಾಖೆಯು ದುರಸ್ತಿ ಕಾರ್ಯ ಮಾಡಬೇಕು ಇಲ್ಲ ವಾದಲ್ಲಿ ಪ್ರತಿಭಟನೆ ಮಾಡುವುದಾಗಿ ತೇಜಸ್ವಿ ನಾಗಲಿಂಗ ಸ್ವಾಮಿ ಎಚ್ಚರಿಸಿದ್ದಾರೆ.