ಮೈಸೂರು: ಮಕ್ಕಳು ನಮ್ಮ ಭವಿಷ್ಯದ ಶಕ್ತಿಯಾಗಿದ್ದಾರೆ ಎಂದು ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದರು.
ಮಕ್ಕಳಲ್ಲಿ ಸೃಜನಶೀಲತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಪರಿಸರ-ನಿಸರ್ಗ ಎಂಬ ವಿಷಯದ ಕುರಿತು ಚಿತ್ರಕಲೆ ಸ್ಪರ್ಧೆಯನ್ನು ಹಮ್ಮಿಕೊಂಡು ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ರಾಜೀವ್,ಮಕ್ಕಳ ಕಲ್ಪನೆ ಮತ್ತು ಸೃಜನಶೀಲತೆಗೆ ಪ್ರೋತ್ಸಾಹ ನೀಡುವ ಈ ರೀತಿಯ ಕಾರ್ಯಕ್ರಮಗಳು ಒಳ್ಳೆಯದು ಎಂದು ಹೇಳಿದರು.
ಪರಿಸರ ರಕ್ಷಣೆ ನಮಗೆ ಸರ್ವಸ್ವವಾಗಿದೆ, ಮತ್ತು ಈ ಸ್ಪರ್ಧೆ ಮೂಲಕ ನಾವು ಮಕ್ಕಳಿಗೆ ಪರಿಸರದ ಮಹತ್ವವನ್ನು ಅರಿತುಕೊಳ್ಳಲು ಪ್ರೇರೇಪಿಸಬಹುದು ಎಂದು ತಿಳಿಸಿದರು.
ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಅವರು ಮಾತನಾಡಿ,ಪ್ರಕೃತಿ ಮತ್ತು ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗ. ಮಕ್ಕಳಲ್ಲಿ ಈ ಕುರಿತು ಜಾಗೃತಿಯ ಬೆಳವಣಿಗೆ ಅಗತ್ಯ. ಈ ರೀತಿಯ ಸ್ಪರ್ಧೆಗಳು ಬಣ್ಣಗಳಿಂದ ಮಾತ್ರವಲ್ಲ, ಬುದ್ಧಿಯಿಂದ ಕೂಡಾ ಪರಿಸರದ ಮಹತ್ವವನ್ನು ಅವರ ಹೃದಯದಲ್ಲಿ ನೆಲೆಸಿಸುತ್ತವೆ ಎಂದು ಹೇಳಿದರು.
ಎಸಿಪಿ ಎಚ್ ಬಿ ರಮೇಶ್ ಕುಮಾರ್ ಮಾತನಾಡಿ ಮಕ್ಕಳಿಗೆ ಪರಿಸರದ ಬಗ್ಗೆ ತಿಳಿಸಿಕೊಟ್ಟು ಜಾಗೃತಿ ಮೂಡಿಸಿದರು.
ಎಸ್.ಪಣಿರಾಜ್, ಬ್ರಾಹ್ಮಣರ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಪಣೀಶ್ ಮತ್ತು ಕೆ.ವಿ. ಮಲ್ಲೇಶ್, ಮಾಜಿ ಮೇಯರ್ ಗಳಾದ ಬೈರಪ್ಪಕೆ ವಿ.ಮಲ್ಲೇಶ್, ಲಯನ್ಸ್ ಜೆ. ಲೋಕೇಶ್ ಕೋರಿ. ವೀರೇಶ್ ಎಂ. ಕೆ. ಮುತ್ತಪ್ಪ ಅವರು ಪರಿಸರ ಉಳಿಸಿ ಪರಿಸರ ಬೆಳೆಸಿ ಎನ್ನುವ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಿದರು.
ಈ ಕಾರ್ಯಕ್ರಮ ಆರ್. ಕುಮಾರ್ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿತು.
ಸ್ಪರ್ಧೆಯಲ್ಲಿ 61 ಮಕ್ಕಳು ಭಾಗವಹಿಸಿದ್ದರು. ಬಣ್ಣಗಳಿಂದ ತುಂಬಿದ ಅವರ ಕಲಾಕೃತಿಗಳು ಪರಿಸರದ ಮೇಲಿನ ಅವರ ಭಾವನೆಗಳನ್ನು ಮತ್ತು ಸೃಜನಾತ್ಮಕತೆಯನ್ನು ಪ್ರದರ್ಶಿಸಿದವು.
ಕ್ಷಿತಿ – 5000 ರೂ.ಪ್ರಥಮ ಬಹುಮಾನ,
ಧೃತಿ ವಿ. ಶಾ -3000 ರೂ ದ್ವಿತೀಯ ಬಹುಮಾನ,
ತೀರ್ಥ ಬಿ. ಸೋನಿ -2000 ತೃತೀಯ ಬಹಮಾನ ನೀಡಲಾಯಿತು.