ಜೆಡಿಎಸ್ ಕಚೇರಿಯಲ್ಲಿ ಕನಕದಾಸರ ಜಯಂತೋತ್ಸವ

ಮೈಸೂರು: ಮೈಸೂರಿನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸರ 537ನೇ ಜಯಂತೋತ್ಸವ ಆಚರಣೆ ಮಾಡಲಾಯಿತು.

ಕನಕದಾಸರ ಭಾವಚಿತ್ರ ಇಟ್ಟು ಪೂಜೆ ಮಾಡಿದ ಜೆಡಿಎಸ್ ಮುಖಂಡರು ದಾಸ‌ ಶ್ರೇಷ್ಠರಿಗೆ ಪುಷ್ಪ ನಮನ ಸಲ್ಲಿಸಿದರು.

ಈ ವೇಳೆ ಮೈಸೂರು ನಗರ ಜೆ.ಡಿ.ಎಸ್ ಅಧ್ಯಕ್ಷ ಕೆ ಟಿ ಚೆಲುವೇಗೌಡ, ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್ ಮೈಸೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾಶಂಕರೇಗೌಡ, ಜಿಲ್ಲಾಧ್ಯಕ್ಷೆ ದ್ರಾಕ್ಷಾಯಿಣಿ, ಹಿರಿಯ ಮುಖಂಡರಾದ ಎಚ್ ಕೆ ರಮೇಶ್, ಮಾಜಿ ಮಹಾಪೌರರಾದ ಕೃಷ್ಣ, ಹಿರಿಯ ಉಪಾಧ್ಯಕ್ಷ ಫಾಲ್ಕಾನ್ ಬೋರೇಗೌಡ,ನಗರ ಹಿಂದುಳಿದ ವರ್ಗದ ಅಧ್ಯಕ್ಷ ಕುಮಾರ್, ನಗರ ಎಸ್ ಟಿ ಮೋರ್ಚಾ ಅಧ್ಯಕ್ಷ ಮಧುವನ ಚಂದ್ರು,ನರಸಿಂಹರಾಜ ಕ್ಷೇತ್ರದ ಬ್ಲಾಕ್ ಅಧ್ಯಕ್ಷರುಗಳಾದ ಎಂ ಎನ್ ರಾಮು, ರಿಜ್ವಾನ್, ಚಾಮರಾಜ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ, ಮುಖಂಡರುಗಳಾದ ಶೇಖರ್, ಆನಂದ್, ಬಬಿತಾ, ನಾಗರಾಜ್, ಚಿಕ್ಕತಾಯಮ್ಮ ಮತ್ತಿತರರು ಉಪಸ್ಥಿತರಿದ್ದರು.