ಮೈಸೂರು: ದಾಸ ಶ್ರೇಷ್ಠರಾದ ಕನಕದಾಸರ ಬದುಕೇ ಮಾನವ ಕುಲಕ್ಕೆ ಒಂದು ಸಂದೇಶ
ಎಂದು ಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ ಹೇಳಿದರು.
ನಗರದ ವಿದ್ಯಾರಣ್ಯಪುರಂ ನಲ್ಲಿರುವ ಭಾರತಿ ವೃದ್ಧಾಶ್ರಮದಲ್ಲಿ ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ ವತಿಯಿಂದ ಭಕ್ತ ಕನಕದಾಸರ 537ನೇ ಜಯಂತಿ ಅಂಗವಾಗಿ ವೃದ್ಧಾಶ್ರಮದ ಹಿರಿಯರಿಗೆ ಹಣ್ಣು ಹಂಪಲು ವಿತರಿಸಿ,ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಜಾತ್ಯತೀತ ಮೌಲ್ಯಗಳನ್ನು ಪ್ರತಿಪಾದಿಸಿದ ಕನಕದಾಸರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದು ಶ್ರೀಗಳು ತಿಳಿಸಿದರು.
ಕನಕದಾಸರು ಸಾಹಿತ್ಯ, ಸಂಗೀತದ ಗಣಿ.
ಕನಕದಾಸರು ಕವಿಗಳು ಮಾತ್ರವಲ್ಲ, ಅವರೊಬ್ಬ ಸಾಹಿತ್ಯ ಮತ್ತು ಸಂಗೀತ ಲೋಕದ ಗಣಿ ಎಂದು ಹೇಳಿದರು.
ಶಾಂತಮ್ಮ (ಸಾಮಾಜಿಕ ಕ್ಷೇತ್ರ),
ಬಸವರಾಜ್ ಬಸಪ್ಪ(ಸಹಕಾರಿ ಕ್ಷೇತ್ರ),
ಗಿರೀಶ್ (ವೈದ್ಯಕೀಯ ಕ್ಷೇತ್ರ),
ವೀರಭದ್ರ ಸ್ವಾಮಿ (ಸಂಘಟನಾ ಕ್ಷೇತ್ರ),
ಮಂಜೇಶ್ ಮೌರ್ಯ (ಸಾಮಾಜಿಕ ಕ್ಷೇತ್ರ),
ಇವರುಗಳಿಗೆ ಶ್ರೀ ಕನಕ ಸೇವಾರತ್ನ ಪ್ರಶಸ್ತಿ ನೀಡಲಾಯಿತು.
ಜೆಡಿಎಸ್ ಕಾರ್ಯದಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್, ಅಲೋಕ್ ಜೈನ್, ಸುಚೇಂದ್ರ, ಮಹಾನ್ ಶ್ರೇಯಸ್, ಓಂ ದೇವ್, ಪದ್ಮಾವತಿ, ಛಾಯಾ, ಯಶ್ವಂತ್ ಕುಮಾರ್, ರಾಜೇಶ್ ಕುಮಾರ್, ಮಹೇಶ್, ಶ್ರೀಧರ್, ಅಕ್ಷಯ ಪ್ರದರ್ಶನ, ಹರ್ಷಿತ್ ಎಸ್ ನಾಗೇಶ್, ಪುನೀತ್ ಮತ್ತಿತರರು ಹಾಜರಿದ್ದರು.