ಸೈನಿಕ ಅಕಾಡೆಮಿಯಲ್ಲಿ ಮಕ್ಕಳ ದಿನಾಚರಣೆ: ಮಕ್ಕಳಿಗೆ ಪುಸ್ತಕ ವಿತರಣೆ

Spread the love

ಮೈಸೂರು: ಮೈಸೂರಿನ ಬೆಳವಾಡಿ ಸಿಲಿಕಾನ್ ವ್ಯಾಲಿ ಬಡಾವಣೆ ಇಲ್ಲಿರುವ ಸೈನಿಕ ಅಕಾಡೆಮಿ ಸಂಸ್ಥೆ ವತಿಯಿಂದ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಯಿತು.

ಸೈನಿಕ ಅಕಾಡೆಮಿ ಸಂಸ್ಥೆಯಲ್ಲಿ
ತರಬೇತಿ ಪಡೆದುಕೊಳ್ಳುತ್ತಿರುವ ಎಲ್ಲಾ ಮಕ್ಕಳಿಗೂ ಸ್ವಾತಂತ್ರ್ಯ ಹೋರಾಟಗಾರರ ಬಗೆಗಿನ ಪುಸ್ತಕಗಳನ್ನು ವಿತರಿಸಲಾಯಿತು.

ಈಗಿನ ಮಕ್ಕಳಿಗೆ ಅವಶ್ಯಕತೆ ಇರುವ ಪುಸ್ತಕಗಳನ್ನು ವಿತರಿಸಲಾಯಿತು, ಇದೆ ಸಂದರ್ಭದಲ್ಲಿ 25 ವರ್ಷಗಳಿಂದ ಹೂಟಗಳ್ಳಿ ಪ್ರದೇಶದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿ ಜನರ ಆರೋಗ್ಯ ಕಾಪಾಡಿರುವ ಡಾ. ದಿನೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸೈನಿಕ ಅಕಾಡೆಮಿಯ ಸಂಸ್ಥಾಪಕರು ಹಾಗೂ ಕಮಾಂಡೋ ಶ್ರೀಧರ ಸಿ ಎಂ ಅವರು ಮಾತನಾಡಿ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು, ಭಾರತದೇಶದ ಮೊಟ್ಟ ಮೊದಲ ಪ್ರಧಾನ ಮಂತ್ರಿ ಆಗಿ ಸುಮಾರು 17 ವರ್ಷಗಳ ಕಾಲ ದೇಶ ಸೇವೆ ಜನ ಸೇವೆ ಮಾಡಿದ ಭಾರತ ರತ್ನ ಜವಾಹರ್ ಲಾಲ್ ನೆಹರು ಜೀ ಅವರು ಮಕ್ಕಳನ್ನು ಅಪಾರ ಪ್ರೀತಿ ಮಾಡುತಿದ್ದರು. ಮಕ್ಕಳನ್ನು ಸುಂದರವಾದ ಹೂವಿನ ತೋಟಕ್ಕೆ ಹೋಲಿಕೆ ಮಾಡುತಿದ್ದರು, ಅವರ ಜನ್ಮದಿನದ ನೆನಪಿಗೆ ಈ ಮಕ್ಕಳ ದಿನಾಚಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಹ ಸಂಸ್ಥಾಪಕಿ ಅನಿತಾ ಶ್ರೀಧರ, ಸಹ ಸಿಬ್ಬಂದಿಗಳು, ಸೈನಿಕ ಅಕಾಡೆಮಿಯ ಅಭ್ಯರ್ಥಿಗಳು ಉಪಸ್ಥಿತರಿದ್ದರು.