ಮಹಿಳೆಯರ ಸಬಲೀಕರಣಕ್ಕೆ ಸಹಕಾರಿ ಸಂಘಗಳ ಉತ್ತಮ ಕಾರ್ಯ:ನಾಗರಾಜು

Spread the love

ಮೈಸೂರು: ಯುವಜನರ ಅಭಿವೃದ್ಧಿ ಯಲ್ಲಿ ಮತ್ತು ಮಹಿಳೆಯರ ಸಬಲೀಕರಣಕ್ಕೆ ಸಹಕಾರಿ ಸಂಘಗಳು ಅತ್ಯುತ್ತಮ ಕಾರ್ಯ ಮಾಡಿವೆ ಎಂದು ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಖಜಾಂಜಿ ಕೆ. ನಾಗರಾಜು ಶ್ಲಾಘಿಸಿದರು.

ಕೃಷ್ಣಮೂರ್ತಿ ಪುರಂನಲ್ಲಿರುವ ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಆವರಣದಲ್ಲಿ 71ನೇ ಸಹಕಾರ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿರು.

ಉಳ್ಳವರು ಇತರರಿಗೆ ಸಹಾಯಹಸ್ತ ಚಾಚುವ ಅದಮ್ಯ ಗುಣವನ್ನು ಮೈಗೂಡಿಸಿಕೊಳ್ಳುವಂತೆ ಮಾಡಿ ಜೀವನಾ ಅಭಿವೃದ್ಧಿಯ ಕಹಳೆ ಮೊಳಗಿಸುವಲ್ಲಿ ತನ್ನದೇ ಆದ ಪಾತ್ರವನ್ನು ಸಹಕಾರಿ ಸಂಘಗಳು ನಡೆಸುತ್ತಿವೆ ಎಂದು ತಿಳಿಸಿದರು.

ಸಹಕಾರ ತತ್ವವು ಭಾರತದಲ್ಲಿ ಉತ್ಕೃಷ್ಟ ಸಾಧನೆ ಮಾಡಿದೆ, ಸಹಕಾರಿ ಸಂಘಗಳು ಅತ್ಯುತ್ತಮ ಕಾರ್ಯ ಮಾಡುತ್ತಿವೆ ಎಂದು ಹೇಳಿದರು.

ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಎಂ ಡಿ ಗೋಪಿನಾಥ್,ಉಪಾಧ್ಯಕ್ಷರಾದ ಎಂ ಎನ್ ಸೌಮ್ಯ, ನಿರ್ದೇಶಕ ಮಂಡಲಿ ಸದಸ್ಯರಾದ ಸಿ ವಿ ಪಾರ್ಥಸಾರಥಿ, ಹೆಚ್ ಎಸ್. ಪ್ರಶಾಂತ್ ತಾತಾಚಾರ್, ಎಂ. ಆರ್.ಬಾಲಕೃಷ್ಣ ,ಹೆಚ್ ಪಿ.ಚೇತನ್, ಎನ್. ಪಣಿರಾಜ್ , ವಿಕ್ರಂ ಅಯ್ಯಂಗಾರ್,ಪಿ.ಮಹಿಮ , ಎನ್. ನಾಗಶ್ರೀ, ಕೆ ಎನ್ ಅರುಣ್, ಶಿವರುದ್ರಪ್ಪ,ಎಸ್ ರಾಜಮ್ಮ , ಎಂ ಪಿ
ಶಾಶ್ವತಿ ನಾಯಕ ಹಾಗೂ ಪ್ರಭಾರ ಕಾರ್ಯದರ್ಶಿ ಎನ್ ವೀಣಾ ಹಾಗೂ ಸದಸ್ಯರು, ಸಿಬ್ಬಂದಿ ಹಾಜರಿದ್ದರು.