ಮೈಸೂರು: ಮೈಸೂರಿನ ಕುವೆಂಪುನಗರದ ಪ್ರಸನ್ನ ಶಿವಲಿಂಗೇಶ್ವರ ಸ್ವಾಮಿ ದೇವಾಲಯದ ಬಳಿ ಹೆಚ್ ವಿ ರಾಜೀವ್ ಸ್ನೇಹ ಬಳಗದ ಆರ್ ಕುಮಾರ್ ನೇತೃತ್ವದಲ್ಲಿ ಈ ಬಾರಿ ಕೂಡ ಜನರಿಗೆ ತುಳಸಿ ಮತ್ತು ಬೆಟ್ಟದನಲ್ಲಿ ಕಾಯಿ ಗಿಡಗಳನ್ನು ವಿತರಿಸಲಾಯಿತು.
ಈ ವೇಳೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೈತ ಮಹಿಳೆ ಗವ್ಯಸಿದ್ದರ್ ಸ್ವರೂಪಿಣಿ ಮಾತನಾಡಿ, ತುಳಸಿ ಹಬ್ಬದ ಪ್ರಯುಕ್ತ ತುಳಸಿ ಹಾಗೂ ಬೆಟ್ಟದ ನೆಲ್ಲಿಕಾಯಿಯನ್ನು ಹಂಚುವುದು ನಿಜಕ್ಕೂ ಒಳ್ಳೆಯದು ಎಂದು ಹೇಳಿದ್ದಾರೆ.
ಇದರಿಂದ ಧಾರ್ಮಿಕತೆಯು ಬೆಳೆಯುತ್ತದೆ ಅದರ ಜೊತೆಗೆ ಪರಿಸರದ ಸಂರಕ್ಷಣೆಯು ಆಗುತ್ತದೆ ಇಂತಹ ಒಳ್ಳೆಯ ಕೆಲಸ ನಿಜಕ್ಕೂ ಖುಷಿಯ ವಿಚಾರ ಈ ಕಾರ್ಯ ಮಾಡುತ್ತಿರುವ ಸ್ನೇಹ ಬಳಗಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ವೇಳೆ ಹುಡ್ಕೋ ಕುಮಾರ್, ದೇವಾಲಯದ (ಅಧ್ಯಕ್ಷರು) ಜೆ. ಆರ್. ಶ್ರೀ ರಂಗಯ್ಯ. ಬಿ.ಪಿ ಪುಟ್ಟಸ್ವಾಮಿ(ಗೌರವಾಧ್ಯಕ್ಷರು) ಎಲ್. ಲೋಕೇಶ್(ಪೂರ್ಣಪ್ರಜ್ಞ ಶಾಲೆ), ಸೈಲೆಂದರ್ (ಉಪಾಧ್ಯಕ್ಷರು)ಅರವಿಂದ ಉಪಾಧ್ಯಕ್ಷರು. ಎಸ್.ಪಿ. ತ್ಯಾಗರಾಜ್( ಖಜಾಂಜಿ) ಬಿ. ಶ್ರೀಕಾಂತ್ ಕಾರ್ಯದರ್ಶಿ ಹಾಗೂ ರೇವಣ್ಣ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.