ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತ ಕೊನೆಗಾಣಿಸಲು ಮೂರೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕೈ ಪಕ್ಷದ ಅಭ್ಯರ್ಥಿಗಳನ್ನು ಜನ ಸೋಲಿಸಲಿದ್ದಾರೆ ಎಂದು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾ ನಂದೀಶ್ ಭವಿಷ್ಯ ನುಡಿದಿದ್ದಾರೆ.
ಎರಡು ಕಡೆ ಬಿಜೆಪಿ, ಒಂದು ಕಡೆ ಎನ್ ಡಿಎ ಅಭ್ಯರ್ಥಿ ನಿಖಲ್ ಕುಮಾರಸ್ವಾಮಿ ಸರ್ಧೆ ಮಾಡಿದ್ದಾರೆ. ಮೂರು ಕ್ಷೇತ್ರದ ಮತದದಾರು ಪ್ರಜ್ಞಾವಂತಿಕೆಯಿಂದ ಮತ ಹಾಕುವ ವಿಶ್ವಾಸ ಇದೆ. ಒಂದೂವರೆ ವರ್ಷ ಕಾಂಗ್ರೆಸ್ ದುರಾಡಳಿತ ನೋಡಿರುವ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಹಿಂದೆ ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿಹಾಕಿದ್ದರು. ಇಂದು ಅದೇ ಲೋಕಾಯುಕ್ತ ಮುಂದೆ ತನಿಖೆ ಎದುರಿಸಬೇಕಾಯಿತು.
ಅವರ ಭ್ರಷ್ಟಾಚಾರ ಸಾಬೀತಾಗಿಬಿಡುತ್ತದೆ ಎಂದು ಸಿಬಿಐ ರಾಜ್ಯಕ್ಕೆ ಆಗಮಿಸಬಾರದು ಎಂದು ನಿರ್ಬಂಧ ಹೇರಿದ್ದಾರೆ. ಇದನ್ನು ಗಮನಿಸಿದರೆ ಹಗರಣದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗುತ್ತಿದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಎಂದು ಹೇಮಾ ಅವರು ಪ್ರಶ್ನಿಸಿದ್ದಾರೆ.