ಕನ್ನಡ ಭಾಷೆಯೇ ಶ್ರೇಷ್ಠ – ಶೋಭಾ ರಮೇಶ್

ಮೈಸೂರು: ಕನ್ನಡ ಭಾಷೆಯೇ ಶ್ರೇಷ್ಠ ಭಾಷೆ ಎಂದು ಕನ್ನಡ ಪ್ರೇಮಿ ಶೋಭಾ ರಮೇಶ್ ಬಣ್ಣಿಸಿದರು.

ಮೈಸೂರಿನ ಮರುಳೇಶ್ವರ ಭವನದಲ್ಲಿ ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೊತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಮಾತೃ ಭಾಷೆ ಕನ್ನಡವೇ ಕನ್ನಡಿಗರಾದ ನಮ್ಮೆಲ್ಲರಿಗೂ ಶ್ರೇಷ್ಠ ವಾದ ಭಾಷೆಯಾಗಿದೆ. ಸುಮಾರು 2000 ಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವ ಕನ್ನಡ ಭಾಷೆಯು ಪರಕೀಯ ಭಾಷೆಯ ವ್ಯಾಮೋಹ ದಿಂದ ಸೊರಗುತ್ತಿದೆ ಎಂದು ವಿಷಾದಿಸಿದರು.

ಕನ್ನಡ ಬಳಸುವುದೇ ಅವಮಾನ ಎಂಬ ಹಂತಕ್ಕೆ ಇಂದಿನ ಯುವ ಸಮೂಹ ಮತ್ತು ಪೋಷಕರು ಬಂದಿದ್ದಾರೆ. ಇದು ಅತ್ಯಂತ ಅಪಾಯಕಾರಿ ಎಂದು ತಿಳಿಸಿದರು.

ಕನ್ನಡ ವನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ಅದರ ಬೆಳೆವಣಿಗೆಗೆ ನಾವೆಲ್ಲ ಶ್ರಮಿಸ ಬೇಕಾಗಿದೆ ಎಂದು ಹೇಳಿದರು.

ಬೇರೆ ಭಾಷೆಯನ್ನು ಗೌರವಿಸೋಣ ನಮ್ಮ ಭಾಷೆ ಯನ್ನು ಪ್ರೀತಿಸಿ, ಬಳಸಿ ಬೆಳೆಸೋಣ ಎಂದು ಕರೆ ನೀಡಿದರು.

ವಿವಿಧ ಆಟಗಳಾದ ಚಮಚ ನಿಂಬೆಹಣ್ಣಿನ ಓಟ, ಬಳೆಗಳನ್ನು ಬೆರಳಿನಲ್ಲಿ ಹಿಡಿದು ಗುರಿ ಮುಟ್ಟುವುದು, ಪಗಡೆ ,ಅಳಿಗುಳಿ ಮನೆ , ಮುಂತಾದ ಮನರಂಜನಾ ಸ್ಪರ್ದೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.

ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ದಿ ಸಂಘದ ಸದಸ್ಯರು ಕನ್ನಡ ನಾಡಿನ ಸಂಕೇತವಾದ ಹಳದಿ ಮತ್ತು ಕೆಂಪು ಬಣ್ಣದ ಉಡುಗೆ ಧರಿಸಿ ಬಂದು ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷ.