ರಾಯಚೂರು: ಸಿಂಧನೂರು, ರಾಯಚೂರು ಬಸವ ಕೇಂದ್ರದ ಅಧ್ಯಕ್ಷರಾದ ವೀರಭದ್ರಪ್ಪ ಕುರಕುಂದಿ ಲಿಂಗೈಕ್ಯರಾಗಿರಾಗಿದ್ದಾರೆ.
ಅವರು ಬಸವ ತತ್ವ ನಿಷ್ಠರು, ಲಿಂಗಾಯತ ಧರ್ಮದ ನಿಸ್ವಾರ್ಥ ಪ್ರಚಾರಕರು, ದಾಸೋಹ ಸಂಪನ್ನರಾಗಿದ್ದರು.
ವೀರಭದ್ರಪ್ಪ ಕುರಕುಂದಿ ಅವರು ಲಿಂಗೈಕ್ಯರಾಗಿರುವುದು ಲಿಂಗಾಯತ ಧರ್ಮಕ್ಕೆ ಶರಣ ಪರಂಪರೆಗೆ ತುಂಬಲಾರದ ನಷ್ಟ ಎಂದು ಬಸವಕೇಂದ್ರದ ಬಸವಯೋಗಿಪ್ರಭುಗಳು ಅಂತಿಮ ಶರಣಾಂಜಲಿಗಳನ್ನು ಸಲ್ಲಿಸಿದ್ದಾರೆ.
ಎಲ್ಲರಿಗೂ ಮಾರ್ಗದರ್ಶನ ಮಾಡಿ ಬಸವ ತತ್ವವನ್ನು ಬಿತ್ತುತ್ತಿದ್ದರು. ನರಸಿಂಹರಾಜಪುರ ಬಸವ ಕೇಂದ್ರಕ್ಕೂ ಅವರು ದಾಸೋಹ ಮಾಡಿದ್ದಾರೆ .ವೀರಭದ್ರಪ್ಪ ಕುರಕುಂದಿಯವರ ಆತ್ಮಕ್ಕೆ ಬಸವಾದಿ ಶರಣರು ಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬದವರಿಗೆ, ಭಕ್ತರಿಗೆ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಗುರುಬಸವಣ್ಣನವರು ಕರುಣಿಸಲಿ ಎಂದು ಬಸವಯೋಗಿಪ್ರಭುಗಳು ಹೇಳಿದ್ದಾರೆ.