ಕೆ ಆರ್ ಬ್ಯಾಂಕ್ ಅಧ್ಯಕ್ಷರಾಗಿ ಬಸವರಾಜ್ ಬಸಪ್ಪ,ಉಪಾಧ್ಯಕ್ಷರಾಗಿ ಸರ್ವಮಂಗಳ ಆಯ್ಕೆ

ಮೈಸೂರು: ಮೈಸೂರಿನ ಪ್ರತಿಷ್ಠಿತ ಶ್ರೀ ಕೃಷ್ಣ ರಾಜೇಂದ್ರ ಸಹಕಾರಿ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಬಸವರಾಜ್ ಬಸಪ್ಪ ಹಾಗೂ ಉಪಾಧ್ಯಕ್ಷರಾಗಿ ಎಚ್ ಎನ್ ಸರ್ವಮಂಗಳ ಆಯ್ಕೆಯಾಗಿದ್ದಾರೆ.

ಶ್ರೀ ಕೃಷ್ಣ ರಾಜೇಂದ್ರ ಸಹಕಾರಿ ಬ್ಯಾಂಕ್ 2024 -2029ನೇ ಸಾಲಿನ
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಅಗ್ರಹಾರದಲ್ಲಿರುವ ಬ್ಯಾಂಕ್ ನ ಕಚೇರಿಯಲ್ಲಿ ಸಂಘದ ರಿಟರ್ನಿಂಗ್ ಅಧಿಕಾರಿ ಬಿ ರಾಜು ಚುನಾವಣೆ ಪ್ರಕ್ರಿಯೆ ನಡೆಸಿದರು.

ಚುನಾವಣೆಯಲ್ಲಿ ಮಾಜಿ ಉಪಾಧ್ಯಕ್ಷರಾದ ಬಸವರಾಜ್ ಬಸಪ್ಪ ಅವರು ಅಧ್ಯಕ್ಷರಾಗಿಯೂ, ಮಾಜಿ ನಿರ್ದೇಶಕರಾದ ಎಚ್ ಎನ್ ಸರ್ವಮಂಗಳ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಈ ವೇಳೆ ಬ್ಯಾಂಕ್ ನಿರ್ದೇಶಕ ಹೆಚ್ ವಿ ಭಾಸ್ಕರ್, ನಗರ ಪಾಲಿಕೆ ಮಾಜಿ ಸದಸ್ಯರಾದ ಎಂ ಡಿ ಪಾರ್ಥಸಾರಥಿ (ಪಾತಿ), ಜಿ ಎಂ ಪಂಚಾಕ್ಷರಿ, ಟಿ ವಿ ಗಣೇಶ್ ಮೂರ್ತಿ ತಾಯೂರು, ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಜಿ ರಾಘವೇಂದ್ರ, ಲೋಕೇಶ್ ಕುಮಾರ್,ಶಿವಮೂರ್ತಿ, ಮಲ್ಲೇಶ್, ಮಹಾನ್ ಶ್ರೇಯಸ್, ಮಂಜಪ್ಪ, ತೀರ್ಥ ಕುಮಾರ್, ಮಂಜುನಾಥ್ ಮತ್ತು ಬ್ಯಾಂಕ್ ಸಿಬ್ಬಂದಿ ಹಾಗೂ ಸ್ನೇಹಿತರು ಶುಭ ಕೋರಿದರು.