ಮೈಸೂರು: ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ 200ನೇ ಹಣ್ಣುಗಳ ವಿತರಣಾ ಕಾರ್ಯಕ್ರಮದ ದ್ವಿಶತಕ ಸೇವಾ ಸಂಭ್ರಮಾಚರಣೆ ಪ್ರಯುಕ್ತ ಮೂವರು ಸಾಧಕರಿಗೆ ಆತ್ಮೀಯವಾಗಿ ಅಭಿನಂದಿಸಲಾಯಿತು.
ರಾಷ್ಟ್ರಪ್ರಶಸ್ತಿ,ರಾಜ್ಯ ಪ್ರಶಸ್ತಿ, ಇನ್ನು ಅನೇಕ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕಿ ಪದ್ಮಾವತಿ, ಖ್ಯಾತ ಆಯುರ್ವೇದಿಕ್ ವೈದ್ಯರಾದ ರಾಜೇಂದ್ರ, ಹಿರಿಯ ಶಿಕ್ಷಕಿ ಸುಜಿಯರಾಣಿ ಅವರನ್ನು ಗೌರವಿಸಲಾಯಿತು.
ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ನಿಲಯ ಪಾಲಕರಾದ ಮೋಹನ್ ಕುಮಾರ್, ಕೆ.ಎಲ್. ಮುದ್ದಪ್ಪ,ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಜೆಡಿಎಸ್ ಮುಖಂಡ ಪಿ.ಎಸ್. ರಾಜಶೇಖರ ಮೂರ್ತಿ, ಹೊಯ್ಸಳ ಕರ್ನಾಟಕ ಸಂಘದ ನಿರ್ದೇಶಕ ರಂಗನಾಥ್, ಕೆ ಆರ್ ನಗರದ ಎಲ್. ಆರ್. ಪ್ರಮೋದ್,ವೀರಭದ್ರ ಸ್ವಾಮಿ, ಮಹೇಶ್, ಶ್ರೀಧರ್, ಮಹಾದೇವ್,ಯಶ್ವಂತ್ ಕುಮಾರ್, ಛಾಯಾ, ಎಂ.ಮಾಧವಿ, ಪುರುಷೋತ್ತಮ್, ಸಂತೋಷ್, ವೇಣು,ಗಾಯತ್ರಿ, ಶೃಂಗರ, ಪುನೀತ್,ಎಸ್.ಪಿ. ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.