ಹಣ್ಣು ವಿತರಣಾ ಕಾರ್ಯ: ದ್ವಿಶತಕ ಬಾರಿಸಿದ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗ

Spread the love

ಮೈಸೂರು: ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗ ಹಣ್ಣುಗಳ ವಿತರಣಾ ಕಾರ್ಯಕ್ರಮದಲ್ಲಿ ದ್ವಿಶತಕ ಬಾರಿಸಿದೆ.

ಮೈಸೂರಿನ ಎಂ ಜಿ ರಸ್ತೆ ಸಿದ್ದಪ್ಪ ವೃತ್ತದ ಬಳಿ ಇರುವ ಜೆಎಸ್ಎಸ್ ಸಂಸ್ಥೆಯ ಕ್ಯಾತನಹಳ್ಳಿ ಸಾಹುಕಾರ್ ಸಿದ್ದಲಿಂಗಯ್ಯನವರ ವಿದ್ಯಾರ್ಥಿ ನಿಲಯದಲ್ಲಿ 200 ನೆ ಹಣ್ಣುಗಳ ವಿತರಣಾ ಕಾರ್ಯಕ್ರಮ ವನ್ನು ವಿಶೇಷವಾಗಿ
ಆಚರಿಸಲಾಯಿತು.

ವಿದ್ಯಾರ್ಥಿ ನಿಲಯದಲ್ಲಿನ ವಿದ್ಯಾರ್ಥಿಗಳಿಗೆ ಹಣ್ಣುಗಳು ಹಾಗೂ ದಿನಸಿ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ದ್ವಿಶ್ರತಕ ಸೇವಾ ಸಂಭ್ರಮಾಚರಣೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಮೈಸೂರು ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್ ಅವರು ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವೃದ್ಧಾಶ್ರಮ, ವಿದ್ಯಾರ್ಥಿ ನಿಲಯ, ವಿಶೇಷ ಚೇತನ ಮಕ್ಕಳ ಆಶ್ರಮಗಳಿಗೆ ಎಸ್ ಪ್ರಕಾಶ್ ಪ್ರಿಯದರ್ಶನ ಸ್ನೇಹ ಬಳಗವು ನಿರಂತರವಾಗಿ ಪ್ರತಿ ಭಾನುವಾರ ಒಂದಲ್ಲ ಒಂದು ಕಡೆ ಹಣ್ಣುಗಳು ದಿನಸಿ ಸಾಮಗ್ರಿಗಳು, ಪುಸ್ತಕಗಳನ್ನು ವಿತರಿಸುವ ಜೊತೆಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ ಎಂದು ತಿಳಿಸಿದರು.

ಹಣ್ಣುಗಳು ಹಾಗೂ ದಿನಸಿ ಸಾಮಗ್ರಿ ವಿತರಿಸುವ ಮೂಲಕ ದ್ವಿಶತಕ ಸೇವಾ ಸಂಭ್ರಮಾಚರಣೆ ಮಾಡಿದ್ದೇವೆ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ರಾಜ್ಯ ಪ್ರಶಸ್ತಿ ಇನ್ನು ಅನೇಕ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕಿ ಪದ್ಮಾವತಿ, ಖ್ಯಾತ ಆಯುರ್ವೇದಿಕ್ ವೈದ್ಯರಾದ ರಾಜೇಂದ್ರ, ಹಿರಿಯ ಶಿಕ್ಷಕಿ ಸುಜಿಯರಾಣಿ, ನಿಲಯ ಪಾಲಕರಾದ ಮೋಹನ್ ಕುಮಾರ್, ಕೆ.ಎಲ್. ಮುದ್ದಪ್ಪ,ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಜೆಡಿಎಸ್ ಮುಖಂಡರಾದ ಪಿ.ಎಸ್. ರಾಜಶೇಖರ ಮೂರ್ತಿ, ಹೊಯ್ಸಳ ಕರ್ನಾಟಕ ಸಂಘದ ನಿರ್ದೇಶಕ ರಂಗನಾಥ್, ಕೆ ಆರ್ ನಗರದ ಎಲ್. ಆರ್. ಪ್ರಮೋದ್,ವೀರಭದ್ರ ಸ್ವಾಮಿ, ಮಹೇಶ್, ಶ್ರೀಧರ್, ಮಹಾದೇವ್,ಯಶ್ವಂತ್ ಕುಮಾರ್, ಛಾಯಾ, ಎಂ.ಮಾಧವಿ, ಪುರುಷೋತ್ತಮ್ ಸಂತೋಷ್ ವೇಣು,ಗಾಯತ್ರಿ, ಶೃಂಗಾರ, ಪುನೀತ್,ಎಸ್‌.ಪಿ. ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.