ಶ್ರೀ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನ ಪುನರ್ ಪ್ರತಿಷ್ಟಾಪನೆ‌

Spread the love

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ಎಣ್ಣೆ ಹೊಳೆ ಕೊಪ್ಪಲು ಗ್ರಾಮದ ಶ್ರೀ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಮುಗಿದಿದ್ದು ಪುನರ್ ಪ್ರತಿಷ್ಟಾಪನೆ ಪ್ರಯುಕ್ತ ವಿಶೇಷ ಪೂಜಾ ಕಾರ್ಯ ಹಮ್ಮಿಕೊಳ್ಳಲಾಯಿತು.

ಕೇಂದ್ರ ಸಚಿವ ಎಚ್. ಡಿ ಕುಮಾರಸ್ವಾಮಿ,ಮಾಜಿ ಸಂಸದ ಪುಟ್ಟರಾಜು, ಶಾಸಕ ಪಾಂಡುಪುರದ ಕೆ ಎಸ್ ಪುಟ್ಟಣ್ಣಯ್ಯ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ದೇವಸ್ಥಾನ ಪುನರ್ ಪ್ರತಿಷ್ಟಾಪನೆ‌ ನೆರವೇರಿತು.

ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತರು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧನ ಸಹಾಯ ಮಾಡಿ ದೇವಸ್ಥಾನ ಅಭಿವೃದ್ಧಿಗೊಳಿಸಿದ್ದಾರೆ.

ಆಗಮಿಕರಾಗಿ ಶ್ರೀರಂಗಪಟ್ಟಣ ಕ್ಷೇತ್ರದ ಚಾಮುಂಡೇಶ್ವರಿ ಅಮ್ಮನವರ ಪ್ರಧಾನ ಅರ್ಚಕರಾದ ಲಕ್ಷ್ಮೀಶ್ ತಂಡದ ಪುರೋಹಿತ ವರ್ಗದವರು ಕುಂಭಾಭಿಷೇಕ ಮತ್ತಿತರ ಪೂಜಾ ಕಾರ್ಯ ನೆರವೇರಿಸಿದರು.

ಈ ವೇಳೆ ಎಚ್. ಡಿ ಕುಮಾರಸ್ವಾಮಿ ಅವರು ದೇಶ ಮತ್ತು ರಾಜ್ಯ ಸುಭಿಕ್ಷ ವಾಗಿರಲಿ ರೈತರಿಗೆ ಒಳ್ಳೆಯದಾಗಲಿ ರೈತರ ಮುಖದಲ್ಲಿ ಮಂದಹಾಸ ಮೂಡಲಿ ಕಾಲಕಾಲಕ್ಕೆ ಮಳೆ ಬೆಳೆ ಆಗಲಿ ಎಂದು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ನುಡಿದರು.