ಕತ್ತು ಕುಯ್ದು ಯುವಕನ‌ ಹತ್ಯೆ:ವಾಮಾಚಾರ ಶಂಕೆ

ನಂಜನಗೂಡು: ತಾಲೂಕಿನ ಗ್ರಾಮ ಒಂದರಲ್ಲಿ ಕತ್ತು ಕುಯ್ದು ಯುವಕನ‌ ಹತ್ಯೆ ಮಾಡಲಾಗಿದ್ದು,ವಾಮಾಚಾರದ ಶಂಕೆ‌ ವ್ಯಕ್ತವಾಗಿದೆ.

ಮಾಲ್ಕುಂಡಿ ಗ್ರಾಮದ ಸದಾಶಿವ(43) ಕೊಲೆಯಾಗಿರುವ ವ್ಯಕ್ತಿ.

ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಸಮೀಪ ನೀರು ಹರಿಯುವ ಸ್ಥಳದಲ್ಲಿ
ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ
ವ್ಯಕ್ತಿಯನ್ನ ನೋಡಿದ ಸ್ಥಳೀಯರು ಹುಲ್ಲಹಳ್ಳಿ ಠಾಣೆಗೆ ಮಾಹಿತಿ ನೀಡಿದ್ದಾರೆ.

ಪಿಎಸ್ಸೈ ಚೇತನ್ ಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನರಳಾಡುತ್ತಿದ್ದ ಸದಾಶಿವ (43) ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಆದರೆ ಆತ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.

ಸ್ಥಳದಲ್ಲಿ ಮಂತ್ರಿಸಿರುವ ನಿಂಬೆಹಣ್ಣು,101 ರೂಪಾಯಿ,ಎಲೆ, ಅಡಿಕೆ ಪತ್ತೆಯಾಗಿದ್ದು,
ಹುಣ್ಣಿಮೆ ಹಿನ್ನಲೆ ವಾಮಾಚಾರ ನಡೆಸಿ ಕೊಲೆ ಮಾಡಿರಬಹುದೆಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಹುಲ್ಲಹಳ್ಳಿ ಠಾಣೆ ಪೊಲೀಸರು ಪ್ರಕರಣ‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.