ಕಿಕ್ ಬಾಕ್ಸಿಂಗ್ ಸ್ಪರ್ಧೆ:ಮಹಾರಾಣಿ ಮಹಿಳಾ ಕಲಾ ಕಾಲೇಜಿನ ವಿದ್ಯಾರ್ಥಿನಿಯರ ಸಾಧನೆ

ಮೈಸೂರು: ಮೈಸೂರು ವಿವಿ ನಗರ ಅಂತರ ಕಾಲೇಜುಗಳ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ವಿದ್ಯಾರ್ಥಿನಿಯರು 2 ಚಿನ್ನ ಹಾಗೂ 6 ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ.

ಯುವರಾಜ ಕಾಲೇಜಿನ ಒಳಾಂಗಣ
ಕ್ರೀಡಾಂಗಣದಲ್ಲಿ ಟೆರೇಶಿಯನ್ ಕಾಲೇಜಿನ ಸಹಯೋಗದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಬಹಳಷ್ಟು ಕಾಲೇಜುಗಳು ಭಾಗವಹಿಸಿದ್ದವು.

70 ಕೆಜಿ ಫುಲ್ ಕಾಂಟಾಕ್ಟ್ ವಿಭಾಗದಲ್ಲಿ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ತೃತೀಯ ಬಿಎ ವಿದ್ಯಾರ್ಥಿನಿ ಎಚ್.ಪಿ.ಪುಷ್ಪಲತಾ ಚಿನ್ನದ ಪದಕ, 70 ಕೆಜಿ ಪಾಯಿಂಟ್ ಫೈಟ್ ವಿಭಾಗದಲ್ಲಿ ತೇಜಶ್ರೀ ಭೋಜೇಗೌಡ ಚಿನ್ನದ ಪದಕ, 70 ಕೆಜಿ ಫುಲ್ ಕಾಂಟ್ಯಾಕ್ಟ್ ವಿಭಾಗದಲ್ಲಿ ಪ್ರಥಮ ಬಿಎ ವಿದ್ಯಾರ್ಥಿನಿ ಬಿಂದುಶ್ರೀ ಬೆಳ್ಳಿ ಪದಕ ಗಳಿಸಿದ್ದಾರೆ.

ಮಹಾರಾಣಿ ಮಹಿಳಾ ಕಲಾ ಕಾಲೇಜಿನ 60 ಕೆಜಿ ಫುಲ್ ಕಾಂಟ್ಯಾಕ್ಟ್ ವಿಭಾಗದಲ್ಲಿ ಪ್ರಥಮ ಬಿಎ ವಿದ್ಯಾರ್ಥಿನಿ ಐಮಾನ್ ಬೆಳ್ಳಿ ಪದಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನ ಶಾಸಕ ತನ್ವೀರ್ ಸೇಟ್ ಅಭಿನಂದಿಸಿದ್ದಾರೆ.