ಮೈಸೂರು: ಮೈಸೂರಿನ ಜೆಡಿಎಸ್ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ವಾಲ್ಮೀಕಿ ಮಹರ್ಷಿ ಭಾವಚಿತ್ರ ಇಟ್ಟು ಪುಷ್ಪ ನಮನ ಸಲ್ಲಿಸಿಪ ಪೂಜಿಸಲಾಯಿತು.
ಮಹರ್ಷಿ ವಾಲ್ಮೀಕಿ ಅವರ ಸಂದೇಶಗಳು ಎಲ್ಲರಿಗೂ ಮಾರ್ಗದರ್ಶಕವಾಗಿವೆ ಎಂದು ಮುಖಂಡರು ಈ ವೇಳೆ ಗುಣಗಾನ ಮಾಡಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ನಗರ ಅಧ್ಯಕ್ಷ ಕೆ.ಟಿ.ಚಲುವೇಗೌಡ, ಮಾಜಿ ಮಹಾಪೌರರುಗಳಾದ ಆರ್ ಲಿಂಗಪ್ಪ, ಎಂ ಜೆ ರವಿಕುಮಾರ್, ಭಾಗ್ಯಮ್ಮ, ಮುಖಂಡರಾದ ಎಚ್ ಕೆ ರಾಮು, ನಗರ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ನಗರ ಮಹಿಳಾ ಅಧ್ಯಕ್ಷೆ ಪ್ರೇಮಾಶಂಕರಗೌಡ, ಮಹಿಳಾ ಜಿಲ್ಲಾಧ್ಯಕ್ಷ ದ್ರಾಕ್ಷಾಯಿಣಿ, ನಗರ ಎಸ್ ಟಿ ಮೋರ್ಚಾ ಅಧ್ಯಕ್ಷ ಮಧುವನ ಚಂದ್ರು, ನಗರ ಹಿಂದುಳಿದ ವರ್ಗದ ಅಧ್ಯಕ್ಷ ಕುಮಾರ್,ನಗರ ಹಿರಿಯ ಉಪಾಧ್ಯಕ್ಷರಾದ ಫಾಲ್ಕನ್ ಬೋರೇಗೌಡ,ಚಾಮರಾಜ ಕ್ಷೇತ್ರದ ಅಧ್ಯಕ್ಷ ಪಿ. ಮಂಜುನಾಥ್, ನರಸಿಂಹರಾಜ ಬ್ಲಾಕ್ ಅಧ್ಯಕ್ಷ ರಿಜ್ವಾನ್, ನಗರ ಮಹಾ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಗೌಡ, ಶೇಖರ್, ಚಾಮರಾಜ ಮಹಿಳಾ ಅಧ್ಯಕ್ಷೆ ಲಕ್ಷ್ಮಿ, ಬಬಿತಾ ಎಚ್. ಡಿ. ಕುಮಾರಸ್ವಾಮಿ ಅಭಿಮಾನಿ ಬಳಗದ ನಗರಾಧ್ಯಕ್ಷ ಆನಂದ್ ಮತ್ತಿತರರು ಹಾಜರಿದ್ದರು.
