ವಾಲ್ಮೀಕಿ ಜೀವನ ಸಂದೇಶಗಳು ಬದುಕಿಗೆ ಪ್ರೇರಣೆ: ನಜರ್ಬಾದ್ ನಟರಾಜ್

ಮೈಸೂರು:‌ ಆದಿಕವಿ, ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಯಣ ಗ್ರಂಥದಲ್ಲಿ ಅಡಕವಾಗಿರುವಂತಹ‌ ಪಿತೃವಾಕ್ಯ ಪರಿಪಾಲನೆ, ಸೋದರ ಬಾಂಧವ್ಯ ಇತ್ಯಾದಿ ಅಂಶಗಳನ್ನು ಜನತೆ ಅಳವಡಿಸಿಕೊಳ್ಳಬೇಕು ಎಂದು ಅಹಿಂದ ಮುಖಂಡ ನಜರ್ಬಾದ್ ನಟರಾಜ್ ಕರೆ ನೀಡಿದರು.

ನಗರದ ಚಾಮರಾಜಪುರಂನಲ್ಲಿ
ಅಹಿಂದ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ವಿತರಿಸಿ ಅವರು ಮಾತನಾಡಿದರು.

ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜೀವನ ಸಂದೇಶಗಳು ಬದುಕಿಗೆ ಪ್ರೇರಣೆ ಮತ್ತು ಪ್ರಭಾವಶಾಲಿಯಾಗಿವೆ,ಅವುಗಳನ್ನು ಸಣ್ಣ ಕೈಪಿಡಿಗಳ ರೂಪದಲ್ಲಿ ಪ್ರಕಟಿಸಿ ಜನಾಸಾಮಾನ್ಯರಿಗೆ ತಲುಪಿಸುವ ಕಾರ್ಯವಾಗಬೇಕು ಎಂದು ನಜರ್ಬಾದ್ ನಟರಾಜ್ ಹೇಳಿದರು.

ಜಿ ರಾಘವೇಂದ್ರ, ವರುಣ ಮಹದೇವ್, ಎಸ್ ಎನ್ ರಾಜೇಶ್, ರವಿಚಂದ್ರ, ಹಡಜನ ಕನಕ ಮೂರ್ತಿ, ಮಂಜುನಾಥ್,ಶಫಿ, ಮಹದೇವ್, ಸಾಲುಂಡಿ ಮಹದೇವ್, ಚಂದ್ರು, ಕೋಟೆಹುಂಡಿ ಶಿವಪ್ಪ, ಪ್ರಕಾಶ್, ರಾಮಚಂದ್ರು ಮತ್ತಿತರರು ಹಾಜರಿದ್ದರು.