ಮನೆ ಮನೆ ದಸರಾ ಆಚರಿಸಿ ಜನಮನ ಗೆದ್ದ ಮಾ.ವಿ.ರಾಮಪ್ರಸಾದ್

Spread the love

ಮೈಸೂರು: ಹಲವಾರು ವರ್ಷಗಳಿಂದ ನವರಾತ್ರಿಯಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದ ಮನೆ ಮನೆ ದಸರಾ ಕಾರ್ಯಕ್ರಮವನ್ನು ಈ ಬಾರಿ ಜಿಲ್ಲಾಡಳಿತ ಮರೆತಿದೆ,ಆದರೆ ಮಾಜಿ ಕಾರ್ಪೊರೇಟರ್ ಮಾ.ವಿ.ರಾಮಪ್ರಸಾದ ಇದನ್ನು ವಿಶೇಷವಾಗಿ ಆಚರಿಸಿದ್ದಾರೆ.

ಮಾ.ವಿ.ರಾಮಪ್ರಸಾದ್ ಅವರು ಮನೆ ಮನೆ ದಸರಾ ಕಾರ್ಯಕ್ರಮವನ್ನ ಮುಂದುವರೆಸಿ ತಮ್ಮ ಕ್ಷೇತ್ರದ ಜನತೆಗೆ ಸಂಭ್ರಮ ಉಣಬಡಿಸಿದರು.

ನವರಾತ್ರಿಯ 9 ದಿನಗಳ ಕಾಲ ಮನೆ ಮನೆ ದಸರಾ ಹೆಸರಲ್ಲಿ ವಿವಿದ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ದಸರಾದಲ್ಲಿ ವಾರ್ಡ್ ನ ಜನತೆ ಭಾಗಿಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಮಕ್ಕಳಿಗೆ ಆಟೋಟಗಳ ಸ್ಪರ್ಧೆ,ಮಹಿಳೆಯರಿಗೆ ರಂಗೋಲಿ ಸ್ಪರ್ಧೆ,ಹಿರಿಯ ನಾಗರೀಕರಿಗೆ ಕ್ರೀಡೆಗಳು,ನಗರಪಾಲಿಕೆ ಪೌರಕಾರ್ಮಿಕ ಕುಟುಂಬಕ್ಕೆ ಆಟೋಟಗಳ ಸ್ಪರ್ಧೆ ಏರ್ಪಡಿಸಿ ಮೆಚ್ಚುಗೆ ಗಳಿಸಿದ್ದಾರೆ.

ಗೊಂಬೆ ಕೂರಿಸುವ ಸ್ಪರ್ಧೆ ನಡೆಸುವ ಮೂಲಕ ಕ್ಷೇತ್ರದ ಜನರ ಸಂತಸಕ್ಕೆ ಕಾರಣರಾಗಿದ್ದಾರೆ.ಅಧಿಕಾರ ಇಲ್ಲದಿದ್ದರೂ ಜನರ ಸಂಪರ್ಕದಿಂದ ದೂರ ಉಳಿಯದ ಮಾ.ವಿ.ರಾಮಪ್ರಸಾದ ಕೇವಲ ರಾಜಕಾರಿಣಿಯಲ್ಲ ತಾನೊಬ್ಬ ಸೇವಕ ಎಂಬುದನ್ನು ಸಾಬೀತುಪಡಿಸಿದರು.

ಈ ವೇಳೆ ಮೈಸೂರ್ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಉಪಾಧ್ಯಕ್ಷ ಜೋಗಿ ಮಂಜು, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಜೆಡಿಎಸ್ ಕಾರ್ಯಧ್ಯಕ್ಷ ಪ್ರಕಾಶ್ ಪ್ರಿಯದರ್ಶನ, ಜಿ ರಾಘವೇಂದ, ನಿರೂಪಕ ಅಜಯ್ ಶಾಸ್ತ್ರಿ, ಅಪೂರ್ವ ಸುರೇಶ್, ಆರೋಗ್ಯಾಧಿಕಾರಿ ಶಿವಪ್ರಸಾದ್, ಕಡಕೋಳ ಜಗದೀಶ್, ಸೋಮೇಶ್, ಧರ್ಮೇಂದ್ರ, ಮಂಜುನಾಥ್, ಹಾಗೂ ಇನ್ನಿತರರು ಹಾಜರಿದ್ದರು.