ಮೈಸೂರು: ಅಸಾಧ್ಯವಾದುದು ಯಾವುದು ಇಲ್ಲ. ಆದರೆ ಅದನ್ನು ಸಾಧಿಸಲು ಕಠಿಣ ಪರಿಶ್ರಮ ಪಡಬೇಕು ಎಂದು ಪ್ರಾದೇಶಿಕ ಆಯುಕ್ತರ ಕಚೇರಿ ಹೆಚ್ಚುವರಿ ಆಯುಕ್ತ ರಾದ ಕವಿತಾ ರಾಜಾರಾಂ ಅಭಿಪ್ರಾಯ ಪಟ್ಟಿದ್ದಾರೆ.
ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ನಡೆದ ಸಂಸ್ಕೃತಿ , ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ರಾಷ್ಟ್ರೀಯ ಕೆಡೆಟ್ ಕಾಪ್ಸ್, ಯುವ ರೆಡ್ ಕ್ರಾಸ್ ಮತ್ತು ರೇಂಜರ್ಸ್ ಚಟುವಟಿಕೆಗಳ
ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳು ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು. ಅದಕ್ಕೆ ಕೇವಲ ಪುಸ್ತಕ ಮಾತ್ರ ಓದಿದರೆ ಸಾಲದು, ಜತೆಗೆ ಪಠ್ಯೇತರ ಚಟುವಟಿಕೆ ಗಳಲ್ಲಿ ಭಾಗವಹಿಸಬೇಕು, ಮಾನಸಿಕ ದೃಡತೆ ಕಾಪಾಡಿಕೊಳ್ಳ ಬೇಕು ಎಂದು ಸಲಹೆ ನೀಡಿದರು.
ಹೆಣ್ಣು ಮಕ್ಕಳಾದ ನಮಗೆ ಸಾಧಿಸುವ ಛಲವಿದೆ ಸಮಾಜ ಕಟ್ಟುವ ಕೆಲಸ ಮಾಡುತ್ತಿರುವ ಎಲ್ಲಾ ಹೆಣ್ಣು ಮಕ್ಕಳು ಅಭಿನಂದನೆಗೆ ಅರ್ಹರು ಎಂದು ಕವಿತಾ ರಾಜಾರಾಂ ತಿಳಿಸಿದರು.
ಮೈಸೂರು ಮಹಾನಗರ ಪಾಲಿಕೆ ಆಯುಕ್ತ
ಆಶಾದ್ ಉರ್ ರೆಹಮಾನ್ ಮಾತನಾಡಿ,
ಯಶಸ್ಸು ಎಂದರೆ ಶ್ರಮ ಮತ್ತು ಅವಕಾಶ ಸದ್ಬಳಕೆ ಮಾಡಿಕೊಳ್ಳುವುದು. ಹಾಗಾಗಿ ಎಲ್ಲರೂ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಜೀವನದಲ್ಲಿ ಗುರಿ ಇರಬೇಕು, ಅದನ್ನು ತಲುಪಲು ನಾವು ಸತತ ಪ್ರಯತ್ನ ಪಡಬೇಕು.,ಅದಕ್ಕಾಗಿ
ಕನಸು ಕಾಣವುದು ಮುಖ್ಯ. ಕನಸನ್ನು ನನಸು ಮಾಡಲು ಪೂರಕವಾಗಿ ಕೆಲಸ ಮಾಡಬೇಕು,ಜತೆಗೆ ಛಲವೂ ಇರಬೇಕು ಎಂದು ಹೇಳಿದರು.
ಎಲ್ಲರಿಗೂ ಸಮಸ್ಯೆ ಸಹಜ. ಆದರೆ ಅದರಿಂದ ನಮ್ಮನ್ನು ಹೊರಗೆ ತರುವುದೇ ಜೀವನ. ಅದಕ್ಕಾಗಿ ನಾವು ಶ್ರಮ ಪಡಬೇಕು ಎಂದು ಕಿವಿ ಮಾತು ಹೇಳಿದರು.
ಪ್ರಾಂಶುಪಾಲ ಪ್ರೊ. ಅಬ್ದುಲ್ ರಹಿಮಾನ್ ಎಂ. ಸಾಂಸ್ಕೃತಿಕ ಸಮಿತಿ ಖಜಾಂಚಿ ಡ. ಬಸವರಾಜು ಜಿ.ಎಲ್, ರಾ. ಸೇ.ಯೋ. ಕಾರ್ಯಕ್ರಮ ಅಧಿಕಾರಿಗಳಾದ ಭೀಮೇಶ್ ಎಚ್. ಜೇ, ಲತರಾಣಿ
ಎಚ್ಚ್.ಎಂ., ದೈಹಿಕ ಶಿಕ್ಷಣ ನಿರ್ದೇಶಕ ರಾದ ಪ್ರತಿಮಾ ಕೆ.ಆರ್ , ಎನ್.ಸಿ.ಸಿ.ಅಧಿಕಾರಿ ಮಮತಾ ಎಂ, ರೇಂಜರ್ ಅಧಿಕಾರಿ ಮಂಜುಳಾ ಶೇಷಗಿರಿ, ಯುವ ರೆಡ್ ಕ್ರಾಸ್ ಸಂಚಾಲಕ ಕುಮಾರ್ ಎಂ.ಎಸ್. ಪತ್ರಾಂಕಿತ ವ್ಯವಸ್ಥಾಪಕಿ ಮೀನಾಕ್ಷಿ ಆರ್., ವಿದ್ಯಾರ್ಥಿ ಸಂಸತ್ ನ ಅಧ್ಯಕ್ಷ ರಾದ ಕಾವ್ಯ ಎಂ ಕಟ್ಟಿ, ಉಪಾಧ್ಯಕ್ಷ ರಾದ ಜೀವಿತ ಎಂ.,ದೀಕ್ಷಿತ ಎಸ್., ಸಾಂಸ್ಕೃತಿಕ ಕಾರ್ಯದರ್ಶಿ ರಕ್ಷಿತಾ ಎಚ್.ಕೆ, ಜಂಟಿ ಕಾರ್ಯದರ್ಶಿ ಜರೀನ ಜೇ, ಕನ್ನಡ ಸಂಪಾದಕಿ ಭೂಮಿಕಾ, ಇಂಗ್ಲಿಷ್ ಸಂಪಾದಕಿ ಬೃಂದಾ ಎ, ರಾ.ಸೇ. ಯೋ. ಕಾರ್ಯದರ್ಶಿ ಶ್ರೀರಕ್ಷ ಜಿ.ಎಂ, ಲೇಖನ ಅರಸ್, ಎನ್.ಸಿ.ಸಿ ಕಾರ್ಯದರ್ಶಿ ದಿವ್ಯಶ್ರೀ ಎಂ, ರೇಂಜರ್ ಕಾರ್ಯದರ್ಶಿ ಅಮೃತ ಜಿ., ಕ್ರೀಡಾ ಕಾರ್ಯದರ್ಶಿ ಲಕ್ಷ್ಮೀ ಕೆ.ಎಸ್, ಕಾವೇರಿ ಜಿ.ಎನ್ ಮತ್ತಿತರರು ಪಾಲ್ಗೊಂಡಿದ್ದರು.