ಬೆಂಗಳೂರು: ಪ್ರವಾಹ ಸಂತ್ರಸ್ತರ ಹಣವನ್ನು, ಅದರಲ್ಲೂ ಜನರು ದೇಣಿಗೆ ಕೊಟ್ಟ ಹಣವನ್ನು ವಿಮಾನದ ಟಿಕೆಟ್ ಖರ್ಚಿಗೆ ಹಾಗೂ ಪಂಚತಾರಾ ಹೋಟೆಲ್ ಮೋಜು ಮಸ್ತಿಗೆ ಕಾಂಗ್ರೆಸ್ ನಾಯಕರು ಬಳಸಿಕೊಂಡಿದ್ದಾರೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್,ನೆರೆಪೀಡಿತ ಜನರಿಗೆ ಮೀಸಲಾದ ಹಣವನ್ನು ತನ್ನ ಸ್ವಂತ ಖರ್ಚಿಗೆ ಧಾರೆ ಎರೆದಿದ್ದು ಯಾರು, ಯಾವ ಪಕ್ಷ
ಹೇಳಿ ಕಪಟಿ ಕಾಂಗ್ರೆಸ್ಸಿಗರೇ ಎಂದು ಆಗ್ರಹಿಸಿದೆ.
ಮೂಡಾ ಮಳ್ಳ ಮುಖ್ಯಮಂತ್ರಿ, ಭೂಗಳ್ಳ, ಸಿಡಿ ಶಿವು ಉಪ ಮುಖ್ಯಮಂತ್ರಿ.ಇದು ಕನ್ನಡಿಗರಿಗೆ ಕಾಂಗ್ರೆಸ್ ಕೊಟ್ಟಿರುವ ಕಳಂಕಿತರ ಭಾಗ್ಯ ಎಂದು ಮೂದಲಿಸಿದೆ.
ಕದ್ದ ವಾಚ್ ಕಟ್ಟಿದವರು ಯಾರು, ಮೂಡವನ್ನು ಮುಕ್ಕಿದ ಮುಖ್ಯಮಂತ್ರಿ ಯಾರು, ಸೈಟುಗಳಿಗೆ ಬೆಲೆ ಕಟ್ಟಿದ ರಿಯಲ್ ಎಸ್ಟೇಟ್ ವ್ಯಾಪಾರಿ ಯಾರು ಲೂಟಿ, ದಂಧೆಗಳ ಅಪರಾವತಾರ, ಗುತ್ತಿಗೆದಾರರನ್ನು ಹಿಂಸಿಸಿ ಕೊಳ್ಳೆ ಹೊಡೆದ ಕಲೆಕ್ಷನ್ ಕಿಂಗ್ ಡೂಪ್ಲಿಕೇಟ್ ಸಿಎಂ ಯಾರು ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಜೆಡಿಎಸ್ ಕರೆದಿದೆ.
ನಿಮ್ಮ ಮುಖವನ್ನೊಮ್ಮೆ ನೋಡಿಕೊಳ್ಳಿ, ನೀವು ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುತ್ತೀರಿ, ಲಜ್ಜೆಗೇಡಿಗಳು. ಕುಮಾರಸ್ವಾಮಿ ಅವರಿಗೆ ಕೊಡುವುದು ಗೊತ್ತು, ನಿಮಗೆ ಬಾಚುವುದು ಗೊತ್ತು. ಕಾಮಾಲೆ ಕಾಂಗ್ರೆಸ್, ಕರ್ನಾಟಕಕ್ಕೆ ಅಂಟಿದ ವೈರಸ್ ಎಂದು ಜೆಡಿಎಸ್ ಹರಿಹಾಯ್ದಿದೆ.
