ಮೈಸೂರು: ಮೈಸೂರು ಅರಮನೆ ಆವರಣದಲ್ಲಿ ನಡೆದ ಸ್ತುತಿಶಂಕರ- ಸ್ತೋತ್ರ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ಟಿ.ಎಸ್ ಶ್ರೀವತ್ಸ ಅವರು ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಶ್ರೀಗಳಿಂದ ಆಶೀರ್ವಾದ ಪಡೆದರು.
ಈ ವೇಳೆ ಶ್ರೀವತ್ಸ ಅವರಿಗೆ ಶ್ರೀ ವಿಧುಶೇಖರ ಭಾರತೀ ಶ್ರೀಗಳು ಶಾಲು ಹೊದಿಸಿ ದೇವರ ಫೋಟೊ ನೀಡಿ ಆಶೀರ್ವಾದಿಸಿದರು.
ಈ ಸಂದರ್ಭದಲ್ಲಿ ನಗರ ಪಾಲಿಕ ಮಾಜಿ ಸದಸ್ಯರಾದ ಎಂ.ಡಿ ಪಾರ್ಥಸಾರಥಿ, ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ವಿಕ್ರಂ ಅಯ್ಯಂಗಾರ್, ಟಿ.ಎಸ್ ಅರುಣ್, ಮಹೇಶ್, ಭೈರತಿ ಲಿಂಗರಾಜು, ಜಯಸಿಂಹ, ಶ್ರೀಧರ್ ಶಾಸ್ತ್ರಿ, ಟಿ.ಪಿ ಮಧುಸೂದನ್, ಚೇತನ್ ಮತ್ತಿತರರು ಹಾಜರಿದ್ದರು.
ಶೃಂಗೇರಿ ಜಗದ್ಗುರುಗಳ ಆಶೀರ್ವಾದ ಪಡೆದ ಟಿ.ಎಸ್.ಶ್ರೀವತ್ಸ