ಮೈಸೂರು: ಎರಡು ದಿನಗಳ ಹಿಂದೆ ಜಿಲ್ಲೆಯ ಹೆಚ್.ಡಿ.ಕೋಟೆ ಮುಸ್ಲೀಂ ಬ್ಲಾಕ್ ನಿವಾಸಿ ಯುವಕನನ್ನು ಹೊಡೆದು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಎಚ್.ಡಿ.ಕೋಟೆ ಪೊಲೀಸರು ಬಂಧಿಸಿದ್ದಾರೆ.
ಹೆಚ್.ಡಿ.ಕೋಟೆ ನಿವಾಸಿ ತೌಹೀದ್ ಪಾಷಾ ಬಂಧಿತ ಆರೋಪಿ.
ಪಟ್ಟಣದ ಮುಸ್ಲಿಂ ಬ್ಲಾಕ್ ನ ಕಲಾಂ ಅಲಿಯಾಸ್ ಮಹಮ್ಮದ್ ಎಂಬ ಯುವಕನೊಂದಿಗೆ ವೈಯಕ್ತಿಕ ವಿಚಾರವಾಗಿ ಜಗಳ ಮಾಡಿ ಪಟ್ಟಣದ ನಿವಾಸಿ ತೌಹೀದ್ ಪಾಷಾ ಎಂಬ ವ್ಯಕ್ತಿ ಕಲಾಂ ತಲೆಗೆ ಮರದ ದೊಣ್ಣೆಯಿಂದ ಹೊಡೆದು ಗಂಭೀರವಾಗಿ ಗಾಯಗೊಳಿ ಕೊಲೆ ಮಾಡಿದ್ದ.
ನಂತರ ಅಲ್ಲಿಂದ ಪರಾರಿಯಾಗಿದ್ದ.ಪ್ರಕರಣ ದಾಖಲಿಸಿಕೊಂಡ ಎಚ್.ಡಿ.ಕೋಟೆ ಪೊಲೀಸರು ಆರೋಪಿ ಬಂಧನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರ ಮಾರ್ಗದರ್ಶನದಲ್ಲಿ 2 ತಂಡ ರಚಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು.
ಆರೋಪಿ ಹುಣಸೂರು ಪಟ್ಟಣದಲ್ಲಿ ಅಡಗಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಾಳಿಯಲ್ಲಿ ಎಚ್.ಡಿ.ಕೋಟೆ ಇನ್ಸ್ಪೆಕ್ಟರ್ ಗಂಗಾಧರ್, ಸೈಯ್ಯದ್ ಕಬೀರ್ ಉಲ್ಲಾ, ಯೋಗೇಶ, ಮೋಹನ್, ಬೀರಪ್ಪ, ಮಹೇಶ್ ಪಾಲ್ಗೊಂಡಿದ್ದರು.
ಯುವಕನ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ