ಮುಂಬೈ: ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ 14 ದಿನಗಳಲ್ಲಿ ಜಾಗತಿಕವಾಗಿ 700 ಕೋಟಿ ರೂ. ಗಳಿಸುವ ಮೂಲಕ ಇತಿಹಾಸ ಬರೆದಿದೆ.
ನಮ್ಮ ದೇಶದಲ್ಲೇ ಈ ಚಿತ್ರವು 479.50 ಕೋಟಿ ರೂ. ಕಲೆಕ್ಟ್ ಮಾಡಿದೆ ಡಿ.19 ರ ರಾತ್ರಿಯೊಳಗೆ 500 ಕೋಟಿ ಗಡಿ ದಾಟುವುದು ಖಚಿತವಾಗಿದೆ.
ಬಾಕ್ಸ್ ಆಫೀಸ್ನಲ್ಲಿ ರಣವೀರ್ ಸಿಂಗ್ ನಟನೆಯ ʻಧುರಂಧರ್ʼ ಸಿನಿಮಾವು ಭಾರೀ ಕಲೆಕ್ಷನ್ ಮಾಡುತ್ತಿದೆ.
ದುರಂದರ್ ಚಿತ್ರಕ್ಕೆ ವಿಶ್ವಾದ್ಯಂತ ಆಗಿರುವ ಗಳಿಕೆಯನ್ನು ಲೆಕ್ಕ ಹಾಕಿದರೆ, ಆಗಲೇ ಈ ಚಿತ್ರದ ಗಳಿಕೆಯು 700 ಕೋಟಿ ರೂ. ದಾಟಿದೆ. ಇದೀಗ ಈ ಚಿತ್ರವು 2ನೇ ವಾರದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರವಾಗಿ ಹೊರಹೊಮ್ಮಿದೆ.
ಪುಷ್ಪ 2 ಸೇರಿದಂತೆ ಹಲವು ಸಿನಿಮಾಗಳ ದಾಖಲೆಗಳನ್ನು ದೊಡ್ಡ ಅಂತರದಿಂದ ಹಿಂದಿಕ್ಕಿದೆ.
ಕ್ರಿಸ್ಮಸ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಆರಂಭವಾಗುತ್ತಿರುವುದರಿಂದ ಚಿತ್ರದ ಗಳಿಕೆಗೆ ಭಾರಿ ಬೂಸ್ಟ್ ಸಿಗಲಿದೆ. ಈ ಯಶಸ್ಸಿನ ಓಟ ಹೊಸ ವರ್ಷದವರೆಗೂ ಮುಂದುವರಿಯುವ ಸಾಧ್ಯತೆಯಿದೆ.
ಕಾಂತಾರ ಚಾಪ್ಟರ್ 1 ಚಿತ್ರದ ಗಳಿಕೆಯನ್ನು ಬ್ರೇಕ್ ಮಾಡಲು ದುರಂದರ್ ಗೆ ಇನ್ನೂ 200+ ಕೋಟಿ ರೂ. ಕಲೆಕ್ಷನ್ ಆಗಬೇಕಿದೆ. ಕಾಂತಾರ ಚಾಪ್ಟರ್ 1 ಚಿತ್ರವು 900+ ಕೋಟಿ ರೂ. ಗಳಿಸಿ, ಈ ವರ್ಷದ ಅತ್ಯಧಿಕ ಗಳಿಕೆ ಕಂಡ ಭಾರತದ ಸಿನಿಮಾಗಳ ಮೊದಲ ಸ್ಥಾನದಲ್ಲಿದೆ.
700 ಕೋಟಿ ರೂ. ಗಳಿಸಿದ ದುರಂಧರ್ !