ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಹಾಗೂ ಕೆಪಿಟಿಸಿಎಲ್ ಮೈಸೂರು ವತಿಯಿಂದ 2025-26ನೇ ಸಾಲಿನ ಸೆಸ್ಕ್ ನಿಗಮ ಮಟ್ಟದ ಕ್ರೀಡಾ ತಂಡಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ನಗರದ ನಜ಼ರಬಾದ್ ನಲ್ಲಿರುವ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸೆಸ್ಕ್ ವಿಭಾಗ ವ್ಯಾಪ್ತಿಗೆ ಒಳಪಡುವ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಹಾಗೂ ಕೊಡಗು ವಿಭಾಗದಿಂದ ಒಟ್ಟು 729 ಕ್ರೀಡಾಪಟುಗಳು ಭಾಗವಹಿಸಿದ್ದು, ಇವರಲ್ಲಿ 611 ಪುರುಷರು ಹಾಗೂ 118 ಮಹಿಳಾ ಕ್ರೀಡಾಪಟುಗಳು ಭಾಗವಹಿಸಿದ್ದರು.
ಕ್ರೀಡಾ ತಂಡಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕೇರಂ, ಬ್ಯಾಸ್ಕೆಟ್ ಬಾಲ್, ಈಜು, ವಾಲಿಬಾಲ್, ಚೆಸ್, ಟೆಬಲ್ ಟೆನ್ನಿಸ್, ಷಟಲ್ ಬ್ಯಾಡ್ಮಿಂಟನ್, ಕ್ರಿಕೆಟ್, ಸ್ನೂಕರ್, ಯೋಗ, ಹಾಕಿ, ಟೆಬಲ್ ಟೆನ್ನಿಸ್, ಫುಟ್‌ಬಾಲ್, ಕಬಡ್ಡಿ, ಲಾನ್ ಟೆನ್ನಿಸ್, ಬಾಲ್ ಬ್ಯಾಡ್ಮಿಂಟನ್, ದೇಹದಾರ್ಡ್ಯ ಹಾಗೂ ಅಥ್ಲೆಟಿಕ್ಸ್ ಸ್ಪರ್ಧೆಗಳಿಗೆ ಆಟಗಾರರನ್ನು ಆಯ್ಕೆ ಮಾಡಲಾಯಿತು.
ಈ ಎಲ್ಲಾ ಕ್ರೀಡೆಗಳು ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ನಡೆಯಿತು.
ಸೆಸ್ಕ್ ಮುಖ್ಯ ಇಂಜಿನಿಯರ್ ಹಾಗೂ ಕ್ರೀಡಾ ಸಮಿತಿ ಅಧ್ಯಕ್ಷ ಮೃತ್ಯುಂಜಯ ಹಾಗೂ ಸೆಸ್ಕ್ ಮುಖ್ಯ ಆರ್ಥಿಕ ಅಧಿಕಾರಿ ಜಿ. ರೇಣುಕಾ ಅವರು ನಿಗಮ ಮಟ್ಟದ ಕ್ರೀಡಾ ತಂಡಗಳ ಆಯ್ಕೆ ಪ್ರಕ್ರಿಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಈ ವೇಳೆ ಮೃತ್ಯುಂಜಯ ಅವರು ಮಾತನಾಡಿ, ಪ್ರತಿಯೊಬ್ಬರಲ್ಲೂ ಕ್ರೀಡಾ ಮನೋಭಾವ ಹಾಗೂ ಕ್ರೀಡಾ ಸ್ಪೂರ್ತಿ ಇರಬೇಕು, ಈ ಮನೋಭಾವ ಕೇವಲ ಕ್ರೀಡೆಯಲ್ಲಿ ಮಾತ್ರವಲ್ಲದೇ, ವೃತ್ತಿಯಲ್ಲೂ ಕ್ರೀಡಾ ಮನೋಭಾವ ಬೆಳೆಸಿಕೊಂಡು ಮುನ್ನಡೆಯಬೇಕೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸೆಸ್ಕ್ ಕ್ರೀಡಾ ಸಮಿತಿ ಕೋಶಾಧ್ಯಕ್ಷ ಪರಮೇಶ್ವರ್, ನೌಕರರ ಸಂಘದ ಉಪಾಧ್ಯಕ್ಷ ಸಂದೀಪ್, ಮಹೇಶ್, ಡಿಪ್ಲೊಮಾ ಇಂಜಿನಿಯರ್ಸ್ ಸಂಘದ ಉಪಾಧ್ಯಕ್ಷ ರವಿಲಿಂಗಪ್ಪ, ಕವಿಮಂ ಪಜಾ/ಪ ವರ್ಗಗಳ ರಾಜ್ಯ ಉಪಾಧ್ಯಕ್ಷ ಮಂಜುನಾಥ್, ನಿಗಮ ಕ್ರೀಡಾ ಕಾರ್ಯದರ್ಶಿ ಎಂ.ಎ. ಮಂಜುನಾಥ್ ಸೇರಿದಂತೆ ಹಲವಾರು ಪದಾಧಿಕಾರಿಗಳು ಹಾಜರಿದ್ದರು.
ಸೆಸ್ಕ್ ನಿಗಮ ಮಟ್ಟದ ಕ್ರೀಡಾ ತಂಡಗಳ ಆಯ್ಕೆ