ಬಸ್ ನಿಲ್ದಾಣದಲ್ಲಿ ಕೆಎಂಪಿಕೆ‌ ಟ್ರಸ್ಟ್ ನಿಂದ ಪೋಲಿಯೊ ಜಾಗೃತಿ ಅಭಿಯಾನ

ಮೈಸೂರು: ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೊ ಲಸಿಕೆ ಕಡ್ಡಾಯವಾಗಿ ಹಾಕಿಸುವ ಮೂಲಕ ಪೋಲಿಯೊ ಮುಕ್ತ ಭಾರತಕ್ಕಾಗಿ ಎಲ್ಲಾ ಪಾಲಕರು ಸಹಕರಿಸಬೇಕು ಎಂದು ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ತಿಳಿಹೇಳಿದರು.

ಮೈಸೂರಿನ ಬಸ್ ನಿಲ್ದಾಣದಲ್ಲಿ
ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ
ಶುಕ್ರವಾರ ಪ್ರಯಾಣಿಕರಿಗೆ ಪಲ್ಸ್ ಪೋಲಿಯೊ ಜಾಗೃತಿ ಮೂಡಿಸಿ‌ ಅವರು ಮಾತನಾಡಿರು.

5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವುದು ಅದರ ಮುಖ್ಯ ಗುರಿಯಾಗಿದೆ. ಡಿ. 21ರಿಂದ 24ರವರೆಗೆ ಅಭಿಯಾನ ನಡೆಯಲಿದ್ದು, ತಮ್ಮ ಮನೆಯ ಸಮೀಪ ಇರುವ ಪೋಲಿಯೊ ಬೂತ್‌ಗಳ ಮೂಲಕ ಲಸಿಕೆ ಹಾಕುವುದು ಮತ್ತು ನಂತರದ ದಿನಗಳಲ್ಲಿ ಲಸಿಕೆಯಿಂದ ವಂಚಿತರಾದ ಮಕ್ಕಳನ್ನು ಗುರುತಿಸಿ, ಮನೆ-ಮನೆಗೆ ಭೇಟಿ ನೀಡುವ ಅಭಿಯಾನ ನಡೆಯಲಿದೆ. ಪಾಲಕರು ಕಡ್ಡಾಯವಾಗಿ ಮಕ್ಕಳಿಗೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಭಿಯಾನದಲ್ಲಿ ಕನ್ನಡ ಮೂವಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್ ಎನ್ ರಾಜೇಶ್, ಅಮಿತ್, ರವಿಚಂದ್ರ, ರಾಕೇಶ್, ಮೋಹನ್, ಹರೀಶ್ ನಾಯ್ಡು ಮತ್ತಿತರರು
ಹಾಜರಿದ್ದರು.