ಎಚ್ ಡಿ ಕುಮಾರಸ್ವಾಮಿ ಅಭಿಮಾನಿಗಳಿಂದ‌ ಶಾಲೆಯಲ್ಲಿ ಹೆಚ್ ಡಿ ಕೆ ಜನ್ಮದಿನಾಚರಣೆ

ಮೈಸೂರು: ಎಚ್ ಡಿ ಕುಮಾರಸ್ವಾಮಿ ಅಭಿಮಾನಿಗಳ ಬಳಗ ವತಿಯಿಂದ ಜಯನಗರದ ಇಸ್ಕಾನ್ ಪಕ್ಕದಲ್ಲಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಸರಳವಾಗಿ‌ ಆಚರಿಸಲಾಯಿತು.

ಶಾಲೆಯ ಮುಖ್ಯಪಾದ್ಯಾಯರಾದ ಶಿವಕುಮಾರ್ ಅವರ ಸಮ್ಮುಖದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ನಿನ್ನೆ ಸರಳವಾಗಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮೈಸೂರು ನಗರಪಾಲಿಕೆ ಮಾಜಿ ಸದಸ್ಯರಾದ ಎಸ್ ಬಿ ಎಮ್ ಮಂಜಣ್ಣ,ಗೌರವಾಧ್ಯಕ್ಷರು ಬೆಲವತ್ತ ಗ್ರಾಮ ರಾಮಕೃಷ್ಣೇಗೌಡರು, ಜಿಲ್ಲಾಧ್ಯಕ್ಷರು ಆನಂದ್ ಗೌಡ್ರು, ಕೆ ಆರ್ ಮಿ ಕಾಲೋನಿ ನಗರ ಅಧ್ಯಕ್ಷರು ನಗರ ಸಂಘಟನಾ ಕಾರ್ಯದರ್ಶಿ ಕೋದಂಡರಾಮ, ಉಪಾಧ್ಯಕ್ಷರಾದ ಸಿದ್ದರಾಜು, ನಾಗ, ನಗರ ಮಹಿಳಾ ಘಟಕದ ಅಧ್ಯಕ್ಷರಾದ ಬಬಿತ, ಜೆಡಿಎಸ್ ಚಾಮರಾಜ ಕ್ಷೇತ್ರದ ಅಧ್ಯಕ್ಷರಾದ ಮಂಜು ಗೌಡ್ರು, ನಗರ ಕಾರ್ಯಾಧ್ಯಕ್ಷರಾದ ಎಸ್. ಪ್ರಕಾಶ್ ಪ್ರಿಯದರ್ಶನ್, ಎನ್ನಾರ್ ಬ್ಲಾಕ್ ಅಧ್ಯಕ್ಷರಾದ ರಾಮು, ನಗರ ಮಾಜಿ ಪ್ರಧಾನ ಕಾರ್ಯದರ್ಶಿ ರಾಜಶೇಖರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಹೇಮಾವತಿ ಜೆಡಿಎಸ್ ಮುಖಂಡರಾದ ರವಿ ಮತ್ತಿತರ ಅಭಿಮಾನಿಗಳು ಹಾಜರಿದ್ದರು.