ಲಯನ್ಸ್ ಪ್ರಾಂತೀಯ ಸಮ್ಮೇಳನ:’ಬದುಕಿ ಬದುಕಲು ಬಿಡಿ’ ಸಂದೇಶಕ್ಕೆ ಆದ್ಯತೆ

ಮೈಸೂರು: ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸಭಾಂಗಣದಲ್ಲಿ ಲಯನ್ಸ್ ಸಂಸ್ಥೆಯ ಪ್ರಾಂತೀಯ ಸಮ್ಮೇಳನವು ಅದ್ದೂರಿಯಾಗಿ ನಡೆಯಿತು.

ಬದುಕಿ ಬದುಕಲು ಬಿಡಿ ಎಂಬ ಮಾನವೀಯ ಸಂದೇಶವನ್ನು ಕೇಂದ್ರವಾಗಿಟ್ಟುಕೊಂಡು ಆಯೋಜಿಸಲಾಗಿದ್ದ ಈ ಸಮ್ಮೇಳನವು ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಹಾಗೂ ಪರಸ್ಪರ ಗೌರವದ ಮಹತ್ವವನ್ನು ಸಾರಿತು.

ಸಮ್ಮೇಳನವನ್ನು ಉದ್ಘಾಟಿಸಿದ ಗ್ರೀನ್ ಆಸ್ಕರ್ ಪ್ರಶಸ್ತಿ ವಿಜೇತರಾದ ಕೃಪಾಕರ ಮತ್ತು ಸೇನಾನಿ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು ಬದುಕುವುದು ಅಗತ್ಯವಿದೆ. ಪ್ರತಿಯೊಬ್ಬರೂ ತಮ್ಮ ಬದುಕಿನ ಜೊತೆಗೆ ಇತರರ ಬದುಕಿನ ಹಕ್ಕನ್ನು ಗೌರವಿಸಿದಾಗ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪತ್ರಿಕಾ ರಂಗದಲ್ಲಿ ಗಣನೀಯ ಸಾಧನೆ ಮಾಡಿದ ಮೈಸೂರು ರಂಗನಾಥ್ ಅವರನ್ನು ಗೌರವಿಸಲಾಯಿತು.

ಈ ವೇಳೆ ಪ್ರಾಂತೀಯ ಅಧ್ಯಕ್ಷರಾದ ಲಯನ್ ಎಚ್ ಸಿ ಕಾಂತರಾಜು ಅವರು ಮಾತನಾಡಿ, “ಬದುಕಿ ಬದುಕಲು ಬಿಡಿ” ಎಂಬುದು ಕೇವಲ ನುಡಿ ಮಾತ್ರವಲ್ಲ, ಅದು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯವಾಗಿದೆ ಎಂದು ತಿಳಿಸಿದರು.

ಯುವಜನತೆ ಈ ಸಂದೇಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆ ಹೆಚ್ಚಲಿದೆ ಎಂದು ಹೇಳಿದರು.

ಲಯನ್ಸ್ ಅಂಬಾಸಿಡರ್ ಸಂಸ್ಥೆಯ ಸ್ಥಾಪಕ ಸದಸ್ಯರು ಅತಿಥಿಯ ಸಮಿತಿಯ ಅಧ್ಯಕ್ಷರಾದ ಲಯನ್ ಎಮ್. ಶಿವಕುಮಾರ್ ಅವರು ಪಿರಿಯಾಪಟ್ಟಣದ ಬೇಗೂರು ಗ್ರಾಮದಲ್ಲಿ ಯುವಕ ಯುವತಿಯರಿಗೆ ಸ್ವಉದ್ಯೋಗ, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ, ಹೊಲಿಗೆ ತರಬೇತಿ ಕೇಂದ್ರವನ್ನು ಸ್ಥಾಪಿಸುವ ಉದ್ದೇಶದಿಂದ ತಮ್ಮ ಎರಡು ಎಕರೆ ಜಾಗವನ್ನು ಲಯನ್ಸ್ ಕ್ಲಬ್ ಮೈಸೂರು ಅಂಬ್ಯಾಸಿಡರ್ ಸೇವಾ ಟ್ರಸ್ಟಿಗೆ ದಾನವಾಗಿ ನೀಡಿದರು.

ಪ್ರಾಂತೀಯ ಸಮ್ಮೇಳದ ಅಂಗವಾಗಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಕ್ಯಾನ್ಸರ್ ಪಿಡೀತ ಎಂಟು ವರ್ಷದ ಮಗುವಿಗೆ 50,000 ಧನ ಸಹಾಯ ,ಹೊಲಿಗೆ ಯಂತ್ರಗಳು, ವಿದ್ಯಾರ್ಥಿಗಳಿಗೆ ಶುಲ್ಕ ವಿತರಿಸಲಾಯಿತು.

ಜಿಲ್ಲಾ ರಾಜ್ಯಪಾಲರಾದ ಲಯನ್ ಕೆ.ಎಲ್.ರಾಜಶೇಖರ ಅವರು ನಮ್ಮ ಜಿಲ್ಲೆಯಲ್ಲಿ ಲಯನ್ ಸಂಸ್ಥೆಗಳಿಂದ ಅತ್ಯಮೂಲ್ಯವಾದ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಂಸ್ಥೆಯ ಎಲ್ಲಾ ಸದಸ್ಯರಿಗೆ ಅಭಿನಂದನೆಗಳು ಎಂದು ಹೇಳಿದರು.

ಮಾಜಿ ಜಿಲ್ಲಾ ರಾಜ್ಯಪಾಲರಾದ ಡಾ. ಎನ್ ಕೃಷ್ಣೇಗೌಡ ಅವರು ಮಾತನಾಡಿ ಪ್ರಸ್ತುತ ವಿದ್ಯಮಾನದಲ್ಲಿ ಮಾನವ ಮತ್ತು ಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿದೆ ಆದ್ದರಿಂದ ಅವುಗಳನ್ನು ನಿಯಂತ್ರಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷರಾದ ಬಾಲು ,ನಾಗರಾಜು, ಮೆಂಟರ್ ಕರಿಯಪ್ಪ, ಡಾ.ಆರ್.ಡಿ.ಕುಮಾರ್ ,ಕೆ.ಟಿ ವಿಷ್ಣು, ರಾಜೇಶ್ ಉಪಸ್ಥಿರಿದರು.

ವಿ.ಶ್ರೀಧರ್ ವಂದಿಸಿದರೆ ಕಾರ್ಯಕ್ರಮದ ನಿರೂಪಣೆಯನ್ನು ಸಿ.ಆರ್.ದಿನೇಶ್ ಮಾಡಿದರು.