ಚಾಮುಂಡೇಶ್ವರಿ ಬಳಗದಿಂದ ಶಾಮನೂರು ನಿಧನಕ್ಕೆ ಸಂತಾಪ

ಮೈಸೂರು: ಮೈಸೂರಿನ ಶಿವರಾಮಪೇಟೆ ಯಲ್ಲಿ ಚಾಮುಂಡೇಶ್ವರಿ ಬಳಗದ ವತಿಯಿಂದ ಕಾಂಗ್ರೆಸ್ ಪಕ್ಷದ ಮುತ್ಸದಿ ರಾಜಕಾರಣಿ, ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ನವರಿಗೆ ಸಂತಾಪ ಸೂಚಿಸಲಾಯಿತು.

ಶಾಮನೂರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರ ಭಾವಚಿತ್ರ ಹಿಡಿದು ಸಂತಾಪ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್ ಅವರು ಶಾಮನೂರು ಶಿವಶಂಕರಪ್ಪ ನವರ ನಿಧನದ ಸುದ್ದಿ ತಿಳಿದು ಆಘಾತವಾಯಿತು ಹಾಗೂ ತೀವ್ರ ದುಃಖವನುಂಟು ಮಾಡಿದೆ ಎಂದು ಹೇಳಿದರು.

ನಮ್ಮ ಪಕ್ಷದ ಹಿರಿಯ ನಾಯಕರು ಹಾಗೂ ಮಾರ್ಗದರ್ಶಕರಾಗಿ ಅವರು ಸಲ್ಲಿಸಿದ ಸೇವೆ ಅಮೂಲ್ಯ,ದೀರ್ಘಕಾಲದ ಸಾರ್ವಜನಿಕ ಹಾಗೂ ರಾಜಕೀಯ ಜೀವನದಲ್ಲಿ ಶಿಸ್ತಿನ ರಾಜಕಾರಣ ಮಾಡಿದ್ದರು.
ಅವರ ಅಗಲಿಕೆ ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯದ ರಾಜಕೀಯ ಕ್ಷೇತ್ರಕ್ಕೂ ತುಂಬಲಾರದ ನಷ್ಟವಾಗಿದೆ, ಅವರ ಆದರ್ಶಗಳು ಹಾಗೂ ಸೇವಾ ಮನೋಭಾವ ಮುಂದಿನ ತಲೆಮಾರಿಗೆ ಪ್ರೇರಣೆಯಾಗಲಿದೆ ಎಂದು ನಜರ್ಬಾದ್ ನಟರಾಜ್ ತಿಳಿಸಿದರು.

ಎಸ್ ಎನ್ ರಾಜೇಶ್, ಕಡಕೋಳ ಶಿವಲಿಂಗು, ದಿನೇಶ್, ಮೊಹಮ್ಮದ್, ನಂಜುಂಡಸ್ವಾಮಿ,ರವಿಚಂದ್ರ, ದೀಪಕ್, ಹರೀಶ್ ನಾಯ್ಡು, ಲೋಕೇಶ್ ಮತ್ತುತರರು ಹಾಜರಿದ್ದರು.