ಸರ್ದಾರ್ ವಲ್ಲಭಭಾಯಿ ಪಟೇಲ್ ನಗರದಲ್ಲಿ ನೀರು,ರಸ್ತೆ ಸಮಸ್ಯೆ ಬಗರಿಸಲು ಜಿ.ಟಿ.ಡಿ ಸೂಚನೆ

ಮೈಸೂರು: ಸರ್ದಾರ್ ವಲ್ಲಭಭಾಯಿ ಪಟೇಲ್ ನಗರದಲ್ಲಿ ನೀರಿನ ಸಮಸ್ಯೆ ಹಾಗೂ ರಸ್ತೆಯ ಸಮಸ್ಯೆ ಕೂಡಲೇ ಬಗರಿಸುವಂತೆ ಅಧಿಕಾರಿಗಳಿಗೆ ಶಾಸಕ ಜಿ.ಟಿ.ದೇವೇಗೌಡರು ಖಡಕ್ ಸೂಚನೆ ನೀಡಿದರು.

ಪೊಲೀಸ್ ಗೃಹ ನಿರ್ಮಾಣ ಸಂಘದ ಅಧ್ಯಕ್ಷ, ನಾಗೇಶ್, ಉಪಾಧ್ಯಕ್ಷ ಮರಿಗೌಡ ಹಾಗೂ ಯುವ ಮುಖಂಡ ಗಗನ್ ಅವರುಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿ.ಟಿ.ದೇವೇಗೌಡರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸ್ಥಳೀಯ ಜನರ ಸಮಸ್ಯೆಗಳನ್ನು ಆಲಿಸಿದರು.

ಶಾಸಕರು ಬಡಾವಣೆಗೆ ಸಂಬಂಧಪಟ್ಟ ಅಧಿಕಾರಿಗಳೊಡನೆ ಚರ್ಚಿಸಿದರು,ಮತ್ತು ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನು ನೀಡಿ ಬಡಾವಣೆಯಲ್ಲಿರುವ ನೀರಿನ ಸಮಸ್ಯೆ ಹಾಗೂ ರಸ್ತೆಯ ಸಮಸ್ಯೆ ಕೂಡಲೇ ಬಗರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬಡವಣಿಗೆ ಮೂರು ಬೋರ ಗಳನ್ನು ಹಾಕಿಸಬೇಕು ಕಾವೇರಿ ನೀರನ್ನು ಒಂದೂವರೆ ತಿಂಗಳಲ್ಲಿ ಕೊಡಬೇಕು ಮತ್ತು ಎರಡು ರಸ್ತೆಗಳನ್ನು ಮಾಡಿ ಮೂರು ಹೈಮಾಸ್ಟ್ ದೀಪಗಳನ್ನು ಹಾಕುವಂತೆ ಅಧಿಕಾರಿಗಳಿಗೆ ಜಿಟಿಡಿ ಸೂಚಿಸಿದರು.

ಇದೇ ವೇಳೆ ಜಿ ಟಿ ಗೌಡರ 75ನೇ ವರ್ಷದ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಪೆಟಲ್ಸ್ ಶಾಲೆಯ ಮಕ್ಕಳು ಹಾಡು ಹೇಳುವ ಮೂಲಕ ಆಚರಿಸಿ ಶಾಸಕರಿಗೆ ಶುಭ ಕೋರಿದರು.

ಈ ವೇಳೆ ಮಕ್ಕಳ ಜೊತೆ ಕೇಕ್ ಕತ್ತರಿಸಿ, ಗಿಡಗಳನ್ನು ನೆಡುವ ಮೂಲಕ ಜಿ ಟಿ ದೇವೇಗೌಡರು ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.

ಇದೇ ಸಂದರ್ಭದಲ್ಲಿ ಯುವ ಮುಖಂಡ ಗಗನ್ ಅವರು ಮಾಡುತ್ತಿರುವ‌‌ ಸಮಾಜ ಸೇವೆಯನ್ನು ಗುರುತಿಸಿ ಬಡಾವಣೆ ಜನರು ಹಾಗೂ ಶಾಸಕರು ಸನ್ಮಾನ ಮಾಡಿದರು.

ಪೊಲೀಸ್ ಬಡಾವಣೆಯ ಜನತೆಯ ಕಷ್ಟಗಳಿಗೆ ತಕ್ಷಣ ಪರಿಹಾರ ಮಾಡಿಕೊಟ್ಟ ಶಾಸಕ ಜಿ.ಟಿ.ದೇವೇಗೌಡರಿಗೆ ಬಡಾವಣೆಯ ಮುಖಂಡರು, ಹಿರಿಯರು ಹಾಗೂ ನಾಗರಿಕರು ವಂದನೆಗಳನ್ನು ಸಲ್ಲಿಸಿದರು.