ಮೃತಪಟ್ಟ ಸೆರೆಸಿಕ್ಕ ನಾಲ್ಕೂ ಹುಲಿಮರಿಗಳು

ಮೈಸೂರು: ಇತ್ತೀಚೆಗೆ ತಾಲ್ಲೂಕು ಗೌಡನಕಟ್ಟೆ ಬಳಿ ಸೆರೆ ಸಿಕ್ಕಿದ್ದ ನಾಲ್ಕೂ ಹುಲಿಮರಿಗಳು ತಾಯಿಯ ಆರೈಕೆ ಇಲ್ಲದೆ ಮೃತಪಟ್ಟಿವೆ.

ಗೌಡನಕಟ್ಟೆಯ ಪ್ರಕಾಶ್‌ ಎಂಬುವರ ಜೋಳದ ಹೊಲದಲ್ಲಿ ನ. 28ರಂದು ನಾಲ್ಕು ಮರಿಗಳೊಂದಿಗೆ ತಾಯಿ ಹುಲಿ ಕಾಣಿಸಿಕೊಂಡಿತ್ತು.

ಮದ್ಯರಾತ್ರಿ ತಾಯಿ ಹುಲಿ ಸೆರೆಸಿಕ್ಕಿತ್ತು,ಎರಡು ದಿನಗಳ ನಂತರ ನಾಲ್ಕು ಹುಲಿಮರಿಗಳು ಪತ್ತೆಯಾಗಿದ್ದವು. ಎರಡು ದಿನ ತಾಯಿಯಿಂದ ದೂರವಾಗಿದ್ದ ಮರಿಗಳು ಆಹಾರವಿಲ್ಲದೆ ಬಳಲಿದ್ದವು.

ಸೆರೆ ಹಿಡಿಯುವಾಗಲೇ ಬಹಳ ನಿತ್ರಾಣಗೊಂಡಿದ್ದವು,ಕೂಡಲೇ ಕೂರ್ಗಳ್ಳಿ
ಪುನರ್ವಸತಿ ಕೇಂದ್ರಕ್ಕೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

ಆದರೆ ತಾಯಿಯ ಆರೈಕೆ,ಹಾಲು ಇಲ್ಲದೆ ಗಾಬರಿಗೊಂಡಿದ್ದ ಮರಿಗಳು ಸೊರಗಿದ್ದವು.
ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ, ಅಸ್ವಸ್ಥಗೊಂಡಿದ್ದ ಹುಲಿ ಮರಿಗಳು ಸಾವನ್ನಪ್ಪಿದ್ದು,ಪಶುವೈದ್ಯರು ಹುಲಿ ಮರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ತಾಯಿ ಹುಲಿ ಆರೋಗ್ಯವಾಗಿದೆ,
ಹುಲಿಮರಿಗಳ ಅಂಗಾಗಗಳನ್ನು ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ,ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.