ಮೈಸೂರು: ವೃತ್ತಿ ಪರತೆಯ ಬಗ್ಗೆ ಇತರರನ್ನು ಅನುಕರಣೆಯನ್ನು ಅಳವಡಿಸಿಕೊಳ್ಳುವ ಬದಲು ಸ್ವ ಇಚ್ಛೆಯಿಂದ ವೃತ್ತಿಪರತೆಗೆ ಬದ್ದರಾಗಬೇಕು ಎಂದು ಪೋಲಿಸ್ ಆಕಾಡೆಮಿ ನಿರ್ದೇಶಕ ಎಸ್ ಎಲ್ ಚೆನ್ನಬಸವಣ್ಣ ತಿಳಿಸಿದರು.
ಮೈಸೂರಿನ ಲಕ್ಷ್ಮಿಪುರಂನಲ್ಲಿರುವ ಜ್ಞಾನಬುತ್ತಿ ಕೇಂದ್ರದಲ್ಲಿ ನಡೆದ 2025-26ನೇ ಸಾಲಿನ ಐಎಎಸ್/ಕೆಎಎಸ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭ, ಅಧ್ಯಯನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪದವಿ ಮತ್ತು ಸ್ನಾತಕೋತ್ತರ ಪದವಿಯ ಹಾಗೆ ಈ ಸ್ಪರ್ಧಾತ್ಮಕ ಉಚಿತ ತರಬೇತಿ ಶಿಬಿರವು ಅಕಾಡೆಮಿಕ್ ಕೋರ್ಸ್ ಆಗಿರುವುದಿಲ್ಲ, ಅಲ್ಲಿ ಒಂದೇ ರೀತಿಯ ವಿಷಯದ ಬಗ್ಗೆ 3 ವರ್ಷಗಳ ಕಾಲ ಓದುತ್ತೇವೆ ಆದರೆ ಈ ತರಬೇತಿಯಲ್ಲಿ ಹತ್ತಾರು ವಿಷಯಗಳ ಬಗ್ಗೆ ಒಟ್ಟಿಗೆ ನಾವು ಕಲಿಯುತ್ತೇವೆ ಎಂದು ಹೇಳಿದರು.
ಸಿವಿಲ್ ಸರ್ವಿಸ್ ಪರೀಕ್ಷೆ ಎಂದರೆ ವಿದ್ಯಾರ್ಥಿಗಳು ತಮ್ಮ ವಿಷಯದ ಕೌಶಲ್ಯವನ್ನು ಹೇಗೆ ಅರ್ಥ ಮಾಡಿಕೊಂಡು ಪ್ರಪಂಚ ಜ್ಞಾನವನ್ನು ತಿಳಿದುಕೊಂಡಿರುತ್ತಾರೆ ಎಂಬುದನ್ನು ತಿಳಿಯಲು ಸಿವಿಲ್ ಸರ್ವಿಸ್ ಪರೀಕ್ಷೆಯ ಮುಖಾಂತರ ಅಧಿಕಾರಿಯಾಗಿ ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಸುತ್ತಮುತ್ತಲಿನ ವಿಚಾರಗಳನ್ನು ತಿಳಿದುಕೊಂಡರೇ ಮಾತ್ರ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು ಎಂದು ತಿಳಸಿದರು.
ಮೈಸೂರು ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ಕವಿತಾ ರಾಜರಾಮ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಒಂದು ಹುಚ್ಚುತನದ ಭಾವನೆಯನ್ನು ಅಳವಡಿಸಿಕೊಂಡರೇ ಮಾತ್ರ ಪಾಸ್ ಮಾಡಬಹುದು. ಪ್ರಸ್ತುತ ದಿನಗಳಲ್ಲಿ ಓದುವ ಮನಸ್ಥಿತಿ ಕಡಿಮೆಯಾಗುತ್ತಿದೆ ಅದಕ್ಕೆ ಬದಲಾಗಿ ಇಂದು ಎಐ ಮೂಲಕ ತರಗತಿಗಳಲ್ಲಿ ಮಾನವರ ಬದಲು ಮಾನವರು ತಯಾರಿಸಿದ ಯಂತ್ರಗಳ ಮೂಲಕವೇ ಉದ್ಯೋಗಗಳು ಕಡಿತಗೊಳಿಸುತ್ತಿವೆ ಅದಕ್ಕೇ ನಾವೇ ನೇರವಾದ ಕಾರಣಕರ್ತರಾಗಿದ್ದೇವೆ. ಗಂಭೀರತೆಯನ್ನು ಅಳವಡಿಸಿಕೊಂಡರೆ ಮಾತ್ರ ಓದುವ ಕಾರ್ಯದಲ್ಲಿ ಮುಂದುವರೆಯಬೇಕು ಇಲ್ಲದಿದ್ದರೆ ಸುಖಾಸುಮ್ಮನೆ ಸಮಯ ಮತ್ತು ವಯಸ್ಸು ಕಳೆಯುತ್ತದೆ. ಆದ್ದರಿಂದ ಪ್ರತಿಯೊಬ್ಬರು ಮೊದಲು ಓದುವ ಗುಣವನ್ನು ಹೊಂದಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಖ್ಯಾತ ವ್ಯಾಗ್ಮಿ ಪ್ರೋ ಕೃಷ್ಣೇಗೌಡ, ಇಂದಿನ GEN-Z ವಿದ್ಯಾರ್ಥಿಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟಕರವಾದ ಸ್ಥಿತಿ, ಸರ್ಕಾರ ಕೆಲಸ ಕೊಡುತ್ತದೆ ಎಂದು ಕಾಯುತ್ತ ಕುಳಿತಿದ್ದರೆ ಯಾವ ಸರ್ಕಾರಗಳು ಸಹ ಕೆಲಸ ಕೊಡುವುದಿಲ್ಲ. ಆದ್ದರಿಂದ ಗಮನದಲ್ಲಿಟ್ಟುಕೊಂಡು ಪರೀಕ್ಷೆಗಳ ಜೊತೆಗೆ ಅನ್ಯ ಉದ್ಯೋಗಗಳನ್ನು ಮಾಡಬೇಕು ಆಗ ಮಾತ್ರ ನಾವು ಬದುಕಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೈನಹಳ್ಳಿ ಸತ್ಯನಾರಾಯಣ ಗೌಡ, ಪಶುಪತಿ ಜಯಪ್ರಕಾಶ್, ರಾಜೀವ್ ಶರ್ಮ, ಜ್ಞಾನಬುತ್ತಿಯ ಕಾರ್ಯದರ್ಶಿಗಳಾದ ಬಾಲಕೃಷ್ಣ, ಸಹ ಪ್ರಾಧ್ಯಾಪಕರಾದ ಕೃ. ಪಾ. ಗಣೇಶ್ , ಸಿ.ಕೆ ಕಿರಣ್ ಕೌಶಿಕ್ ಮತ್ತು ರೋಹನ್, ರವಿ ಕುಮಾರ್ ಉಪಸ್ಥಿತರಿದ್ದರು.
ಸ್ವ ಇಚ್ಛೆಯಿಂದ ವೃತ್ತಿಪರತೆಗೆ ಬದ್ದರಾಗಬೇಕು:ಎಸ್ ಎಲ್ ಚೆನ್ನಬಸವಣ್ಣ