ಎಟಿಎಂ ಯಂತ್ರ ಹೊತ್ತೊಯ್ದ ಕತರ್ನಾಕ್ ಕಳ್ಳರು!

ಬೆಳಗಾವಿ: ಕತರ್ನಾಕ್‌ ಕಳ್ಳರು ಎಟಿಎಂ ಯಂತ್ರವನ್ನೇ ಹೊತ್ತೊಯ್ದಿರುವ ಘಟನೆ ಬೆಳಗಾವಿ‌ ತಾಲೂಕಿನಲ್ಲಿ ನಡೆದಿದೆ.

ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇಂಡಿಯಾ ಎಂಟಿಎಂ ಯಂತ್ರವನ್ನು ಕಳ್ಳರು ಹೊತ್ತೊಯ್ದಿದ್ದಾರೆ.

ತಳ್ಳುಗಾಡಿ ಸಮೇತ ಎಟಿಎಂ ಬಳಿ ಬಂದ ಮೂವರು, ಮೊದಲು ಎಟಿಎಂಗೆ ನುಗ್ಗಿ ಅಲ್ಲಿದ್ದ ಸೆನ್ಸಾರ್ ಶಬ್ಧ ಮಾಡದಂತೆ ಬ್ಲ್ಯಾಕ್ ಸ್ಪ್ರೇ ಸಿಂಪಡಿಸಿದ್ದಾರೆ.

ನಂತರ ಎಟಿಎಂ ಮಷಿನ್ ಹೊರ ತೆಗೆದು ಅದನ್ನು ತಳ್ಳೊ ಗಾಡಿಯಲ್ಲಿಟ್ಟುಕೊಂಡು ಹೋಗಿ ಅಲ್ಲಿಂದ ತಮ್ಮ ವಾಹನಕ್ಕೆ ಯಂತ್ರವನ್ನು ಹಾಕಿಕೊಂಡು ಪರಾರಿ ಆಗಿದ್ದಾರೆ.

ಕಾಕತಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.