ಮೈಸೂರು: ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ತುರ್ತಾಗಿ ಒಬ್ಬ ರೋಗಿಗೆ ಆಪರೇಷನ್ ಇದ್ದುದರಿಂದ ರಕ್ತದ ಅವಶ್ಯಕತೆ ಇದ್ದು, ಸಮಯಕ್ಕೆ ರಕ್ತ ಸಿಗದಿದ್ದ ಕಾರಣ ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ರಾಜಶೇಖರ್ ಅವರು ಬಂದು ರಕ್ತದಾನ ಮಾಡಿ ಒಂದು ಜೀವ ಉಳಿಸಿದ್ದಾರೆ.
ರಾಜಶೇಖರ್ ರವರಿಗೆ ಒಂದು ಹೆಜ್ಜೆ ರಕ್ತದಾನಿಗಳ ಬಳಗದ ವತಿಯಿಂದ ಕೃತಜ್ಞತೆ ತಿಳಿಸಿದ್ದಾರೆ.
ರಕ್ತದ ಅವಶ್ಯಕತೆ ತುಂಬಾ ಇರುವುದರಿಂದ ಪ್ರತಿಯೊಬ್ಬರೂ ಕೂಡ ರಕ್ತದಾನ ಮಾಡುವುದನ್ನು ರೂಡಿಸಿಕೊಳ್ಳಬೇಕು
ರಕ್ತದಾನ ಮಾಡಿ ಜೀವ ಉಳಿಸಿ ನಮ್ಮ ಜೊತೆ ಕೈಜೋಡಿಸಿ ಎಂದು ರಕ್ತದಾನಿ ಮಂಜು ಕೋರಿದ್ದಾರೆ.
ಅದೇ ರೀತಿ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಮತ್ತೊಬ್ಬ ರೋಗಿಗೆ ಆಪರೇಷನ್ ಇದ್ದುದರಿಂದ ಅರುಣ್ ಕುಮಾರ್ ಅವರು ಕೂಡಾ ಆಗಮಿಸಿ ರಕ್ತದಾನ ಮಾಡಿ ಒಂದು ಜೀವ ಉಳಿಸಿದ್ದಾರೆ.
ಅವರಿಗೂ ಒಂದು ಹೆಜ್ಜೆ ರಕ್ತದಾನಿಗಳ ಬಳಗದ ವತಿಯಿಂದ ಕೃತಜ್ಞತೆ ತಿಳಿಸಲಾಯಿತು.