ತಾಜ್ ವೆಸ್ಟ್ ಎಂಡ್ ಹೋಟೆಲ್ ಗೆ ಬಾಂಬ್ ಬೆದರಿಕೆ

Spread the love

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ತಾಜ್ ವೆಸ್ಟ್ ಎಂಡ್ ಹೋಟೆಲ್ ಗೆ ಬಾಂಬ್ ಬೆದರಿಕೆ ಬಂದಿದ್ದು ಅಲ್ಲಿನ ಸಿಬ್ಬಂದಿ ಮತ್ತು ನಗರದ ಜನತೆ‌ ಆತಂಕ‌ ಕ್ಕೊಳಗಾಗಿದ್ದಾರೆ.

ತಾಜ್ ವೆಸ್ಟ್ ಎಂಡ್ ಹೋಟೆಲ್ ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ.

ತಕ್ಷಣ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ದೊರೆತ ಕೂಡಲೇ‌ ಹೈಗ್ರೌಂಡ್ಸ್ ಠಾಣೆ
ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಪರಿಶೀಲನೆ ನಡೆಸಿದರು.

ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ರಾಜಕಾರಣಿಗಳು, ಕ್ರಿಕೆಟ್ ಆಟಗಾರರು, ಉದ್ಯಮಿಗಳು ವಾಸ್ತವ್ಯ ಹೂಡುತ್ತಾರೆ,ಹಾಗಾಗಿ‌ ಪೊಲೀಸರು ತೀವ್ರ ‌ತಪಾಸಣೆ‌ ನಡೆಸಿ ಎಚ್ಚರಿಕೆ ವಹಿಸಿದ್ದಾರೆ.

ಬೆಂಗಳೂರು ‌ಸೆಂಟ್ರಲ್ ಡಿಸಿಪಿ ಶೇಖರ್ ಹೆಚ್.ಟೆಕ್ಕಣ್ಣವರ್ ಈ ಬಗ್ಗೆ ಮಾತನಾಡಿ,ತಾಜ್ ವೆಸ್ಟ್‌ ಎಂಡ್‌ ಹೋಟೆಲ್ ಬಿಗಿ‌ ಭದ್ರತೆ ಮಾಡಲಾಗಿದೆ.ಸಧ್ಯಕ್ಕೆ ಯಾವುದೇ‌ ಬಾಂಬ್ ಪತ್ತೆಯಾಗಿಲ್ಲ,ಅಪರಿಚಿತರು ಇ.ಮೇಲ್ ಮೂಲಕ‌ ಬಾಂಬ್ ಬೆದರಿಕೆ‌ ಹಾಕಿದ್ದಾರೆ ಎಂದು ‌ಸ್ಪಷ್ಟಪಡಿಸಿದ್ದಾರೆ.