ಚಾಮುಂಡಿ ಬೆಟ್ಟ ಗಾಮ ಪಂಚಾಯಿತಿ ನಗರಪಾಲಿಕೆಗೆ ಸೇರಿಸಿ:ತೇಜಸ್ವಿ ಆಗ್ರಹ

ಮೈಸೂರು: ಚಾಮುಂಡಿ ಬೆಟ್ಟ ಅಭಿವೃದ್ಧಿ ಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕ ಜಿ.ಟಿ ದೇವೇಗೌಡರು ಅಲ್ಲಿನ ಗ್ರಾಮ ಪಂಚಾಯಿತಿಯನ್ನು ನಗರ ಪಾಲಿಕೆಗೆ ಸೇರಿಸಲು ಶ್ರಮ ವಹಿಸುತ್ತಿದ್ದರೆ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ವಿರೋಧಿಸುತ್ತಿರುವುದು ಎಷ್ಟು ಸರಿ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಪ್ರಶ್ನಿಸಿದ್ದಾರೆ.

ಚಾಮುಂಡಿ ಬೆಟ್ಟ ಗ್ರಾಮ ಪಂಚಾಯಿತಿಯಲ್ಲಿ ಈಗಾಗಲೇ ಸಾಕಷ್ಟು ಬ್ರಷ್ಟಾಚಾರಗಳು ನಡೆದಿದ್ದು ಅದನ್ನು ಮುಚ್ಚಿ ಹಾಕಲು ನಗರ ಪಾಲಿಕೆಗೆ ಸೇರಿಸಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರೇ ವಿರೋಧಿಸುತ್ತಿದ್ದಾರೆ ಆದ್ದರಿಂದ ಮುಖ್ಯಮಂತ್ರಿಗಳು ಅಭಿವೃದ್ಧಿ ಕಡೆ ಗಮನಹರಿಸಿ ಪಂಚಾಯಿತಿಯನ್ನು ನಗರ ಪಾಲಿಕೆಗೆ ಸೇರಿಸಿದರೆ ಚಾಮುಂಡಿ ಬೆಟ್ಟ ಸಾಕಷ್ಟು ಅಭಿವೃದ್ಧಿ ಕಾಣುತ್ತದೆ ಇಲ್ಲದಿದ್ದರೆ ಕೆಲವು ಭ್ರಷ್ಟ ಅಧಿಕಾರಿಗಳು ಹಾಗೂ ಪಂಚಾಯಿತಿ ಸದಸ್ಯರುಗಳ ಅಧಿಕಾರಕ್ಕೆ ಸಿಕ್ಕಿ ಅಭಿವೃದ್ಧಿ ಕಾಣದೆ ಹಾಗೆ ಉಳಿಯುತ್ತದೆ ಎಂದು ತೇಜಸ್ವಿ ನಾಗಲಿಂಗಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ಚಾಮುಂಡಿ ಬೆಟ್ಟ ಪ್ರವಾಸಿ ತಾಣವಾಗಿದ್ದು ಪ್ರತಿದಿನ ಲಕ್ಷಾಂತರ ಜನ ಬಂದು ಹೋಗುತ್ತಾರೆ. ಇದು ನಗರ ಪಾಲಿಕೆಗೆ ಸೇರಿದರೆ ಬರುವ ಭಕ್ತರಿಗೆ ಸಾಕಷ್ಟು ಮೂಲಭೂತ ಸೌಕರ್ಯ ಸಿಗುತ್ತದೆ. ಗ್ರಾಮ ಪಂಚಾಯಿತಿಯಲ್ಲೇ ಮುಂದುವರೆದರೆ ಈಗಾಗಲೇ ಒಂದು ಕಡೆ ಬೆಟ್ಟ ಕುಸಿದಿದೆ ಸುತ್ತಮುತ್ತಲು ಬೆಟ್ಟ ಕುಸಿಯುವ ಹಾಗೆ ಮಾಡುತ್ತಾರೆ ಎಂಬ ಆತಂಕವಿದೆ ಎಂದು ತೇಜಸ್ವಿ ಹೇಳಿದ್ದಾರೆ.

ಅನುಮತಿ ಇಲ್ಲದೆ ಮನೆ ಕಟ್ಟುವುದು ಒಸಿ ಇಲ್ಲದೆ ಕರೆಂಟ್ ಕೊಡಿಸುವುದು ಹೀಗೆ ಸಾಕಷ್ಟು ಭ್ರಷ್ಟಾಚಾರ ಗಳು ತುಂಬಿ ತುಳುಕಾಡುತ್ತಿವೆ.ಆದ್ದರಿಂದ ಇದಕ್ಕೆ ಅವಕಾಶ ನೀಡದೆ ಅಲ್ಲಿನ ಗ್ರಾಮ ಪಂಚಾಯಿತಿಯನ್ನು ನಗರ ಪಾಲಿಕೆಗೆ ಸೇರಿಸಬೇಕೆಂದು ಕನ್ನಡ ಕ್ರಾಂತಿದಳ ಸಂಘಟನೆಯ ಪರವಾಗಿ ತೇಜಸ್ವಿ ಒತ್ತಾಯಿಸಿದ್ದಾರೆ.

ಇಲ್ಲದಿದ್ದರೆ ಮುಂದಿನ ದಿನದಲ್ಲಿ ಚಾಮುಂಡಿ ಬೆಟ್ಟದಲ್ಲಿ ಪ್ರಾಧಿಕಾರದ ವಿರುದ್ಧ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಎಚ್ಚರಿಸಿದ್ದಾರೆ.