ಹುಣಸೂರು: ಹುಣಸೂರಿನ ಹೆಸರಾಂತ ಡಿ. ದೇವರಾಜ ಅರಸು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣವನ್ನು ಶುಚಿಗೊಳಿಸಿ ಕಸವಿಲೇವಾರಿ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಒತ್ತಾಯಿಸಿದ್ದಾರೆ.
ಹುಣಸೂರು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಗಿಡಗಂಟೆಗಳು ಬೆಳೆದು ಅಶುಚಿತ್ವದಿಂದ ಕೂಡಿದೆ. ಈ ಗಿಡಗಂಟಿಗಳ ಮಧ್ಯದಲ್ಲಿ ಹಾವುಗಳು ವಾಸಸ್ಥಾನ ಮಾಡಿಕೊಂಡು ಆಸ್ಪತ್ರೆಗೆ ಬರುವ ರೋಗಿಗಳು ಭಯದಿಂದ ಓಡಾಡುವಂತಾಗಿದೆ ಎಂದು ಚೆಲುವರಾಜು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಆಸ್ಪತ್ರೆಯ ಸುತ್ತಾಮುತ್ತಲಿನ ಪ್ರದೇಶವನ್ನು ಶುಚಿಗೊಳಿಸದೇ ಇರುವುದರಿಂದ ಹೀಗೆ ಗಿಡಗಂಟಿಗಳು ಬೆಳೆದಿದೆ. ಆಸ್ಪತ್ರೆಯ ಡ್ರೈನ್ಗಳನ್ನು ಸಹ ಕ್ಲೀನ್ ಮಾಡಿಸುತ್ತಿರುವುದಾಗಿ ತಿಳಿದುಬಂದಿದೆ. ನಗರಸಭೆಯ ಗಮನಕ್ಕೆ ತಂದು ಆಸ್ಪತ್ರೆಯ ಆವರಣ ಶುಚಿಗೊಳಿಸಬೇಕಾಗಿತ್ತು. ಆದರೆ ಸಿಬ್ಬಂದಿಗಳಲ್ಲಿ ಈ ಕೆಲಸ ಮಾಡಿಸುತ್ತಿರುವುದು ಎಷ್ಟರ ಮಟ್ಟಿಗೆ.
ಸರಿ ಎಂದು ಚೆಲುವರಾಜು ಪ್ರಶ್ನಿಸಿದ್ದಾರೆ.
ಆಸ್ಪತ್ರೆಯ ಅವರಣವನ್ನು ಶುಚಿಗೊಳಿಸಲು ನಗರಸಭೆಯ ಹಿಟಾಚಿಯಿಂದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ಗಿಡಗಂಟೆಗಳನ್ನು ತೆರವುಗೊಳಿಸಿ ಕಸ ವಿಲೇವಾರಿ ಮಾಡಿ ಸ್ವಚ್ಛತೆಗೊಳಿಸಲು ನಗರಸಭೆ ಆಯುಕ್ತರಿಗೆ ಪತ್ರ ಬರೆದು ಕ್ರಮ ಕೈಗೊಳ್ಳಬೇಕೆಂದು ಚೆಲುವರಾಜು ಆಗ್ರಹಿಸಿದ್ದಾರೆ.
