ಮೈಸೂರು: ಮೈಸೂರಿನಲ್ಲಿ ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜು ಬಸಪ್ಪ ಅವರ ನೇತೃತ್ವದಲ್ಲಿ ಸಾರ್ವ ಜನಿಕರಿಗೆ ಹೋಳಿಗೆ ಹಂಚುವ ಮೂಲಕ ಕನಕ ದಾಸರ ಜಯಂತಿಯನ್ನು ವಿಶೇಷವಾಗಿ ಆಚಾರಿಸಲಾಯಿತು.
ಕುಲ, ಜಾತಿ ,ಮತಗಳ ತಾರತಮ್ಯವನ್ನು ವಿರೋಧಿಸಿ ಸಮಾನತೆ ಸಾರಿದ ಕನಕದಾಸರ ಜಯಂತಿಯನ್ನು ಸಾರ್ವಜನಿಕರೊಂದಿಗೆ ಸೇರಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂತ,ಕವಿ ಕನಕದಾಸರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸಿ ಪೂಜೆ ಮಾಡಿ ನಂತರ ಸರ್ವಜನರಿಗೆ ಹೋಳಿಗೆ ವಿತರಲಿಸಲಾಯಿತು.
ಕನಕದಾಸರ ಜೀವನ ಮತ್ತು ಸಾಧನೆ, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಸಮಾಜದಲ್ಲಿ ಎಲ್ಲರೂ ಸಮಾನರು ಎಂಬುದನ್ನು ಮರೆಯಬಾರದು ಎಂದು ಬಸವರಾಜ್ ಬಸಪ್ಪ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಸವರಾಜು ಬಸಪ್ಪ ಅವರಿಗೆ ಮಂಜೇಶ್, ವಿದ್ಯಾ ಮತ್ತಿತರರು ಸಾಥ್ ನೀಡಿದರು.
