ಮೈಸೂರು: ರೋಟರಿ ಮೈಸೂರು ಅಂಬಾರಿ ವತಿಯಿಂದ ಉಚಿತ ದಂತ ತಪಾಸಣಾ ಶಿಬಿರ ವನ್ನು ಮೈಸೂರಿನ ಭಾರತಿ ಸ್ತ್ರೀ ಸಮಾಜ ಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.
ಉದ್ಘಾಟನೆಯನ್ನು ರೋ ಡಾ. ಸಾಗರ್ ಎಂ.ಜಿ ಮತ್ತು ರೋಟರಿ ವಲಯ 8 ರ ಸೇನಾನಿಗಳಾದ ರೋ.ಎಂ.ಶಿವಕುಮಾರ್ ರೋಟರಿ ಮೈಸೂರು ಅಂಬಾರಿ ಅಧ್ಯಕ್ಷರಾದ ರೋ.ಹರೀಶ್ ಕಾರ್ಯದರ್ಶಿ ರೋ ಮಂಜುನಾಥ್ ಮಾಜಿ ಅಧ್ಯಕ್ಷರುಗಳಾದ ರೋ ಜಗದೀಶ್.ಆರ್. ರೋ.ಜಗದೀಶ್.ಎಲ್., ರೋ. ಭರತ್, ರೋ ಯದು ಕೃಷ್ಣ, ನಿರ್ದೇಶಕರಾದ ರೋ ಲೋಕೇಶ್ ಅವರುಗಳು ಉದ್ಘಾಟಿಸಿದರು.
ಭಾರತಿ ಸ್ತ್ರೀ ಸಮಾಜ ಶಾಲೆಯ ಶಿಕ್ಷಕಿಯರಾದ ವನಿತಾ, ಸುಜಾತಾ,ರೂಪ, ಭಾಗ್ಯಲಕ್ಷ್ಮಿ ಮತ್ತು ದಂತ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡ ಶಾಲೆಯ ಮಕ್ಕಳಿಗೆ ಕೋಲ್ಗೇಟ್ ಟೂತ್ ಪೇಸ್ಟ್ ಮತ್ತು ಬ್ರಷ್ ಗಳನ್ನು ರೋಟರಿ ಮೈಸೂರು ಅಂಬಾರಿ ವತಿಯಿಂದ ನೀಡಲಾಯಿತು.
ಇದೇ ವೇಳೆ ರೋ.ಡಾಕ್ಟರ್ ಸಾಗರ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
