ಜಮೀನಿಗಾಗಿ ತಾಯಿಯ ಕೊಂದ ಮಗಳು!

ಚಿಕ್ಕಮಗಳೂರು:‌ ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂದು ನಾವೆಲ್ಲ ನಂಬಿದ್ದೇವೆ,
ಆದರೆ‌ ಅದೇ‌ ದೇವರಂತಹ‌ ತಾಯಿ ಯನ್ನ ಮಗಳೇ ಕೊಂದಿರುವ ಹೇಯ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಆಸ್ತಿಗಾಗಿ ಮಗಳು ತನ್ನನ್ನು ಹೆತ್ತ ತಾಯಿಯನ್ನು ಹೀನಾಯವಾಗಿ ಉಸಿರುಗಟ್ಟಿಸಿ ಕೊಂದಿರುವ ಘಟನೆ ಜಿಲ್ಲೆಯ ಎನ್ ಆರ್ ಪುರ ಕಾಲೋನಿ,
ಬಾಳೆಹೊನ್ನೂರು ಸಮೀಪದ ಬಂಡಿಮಠ ಗ್ರಾಮದಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ಕುಸುಮ ಎಂಬುವರನ್ನು ಮಗಳು ಸುಧಾ ಕೊಂದಿದ್ದು,
ಇದೀಗ ಮಗಳು ಕಂಬಿ ಎಣಿಸುತ್ತಿದ್ದಾಳೆ.

ಮಗಳು ಸುಧಾ, ತನ್ನ ತಾಯಿಯ ಹೆಸರಿನಲ್ಲಿರುವ ಹಾವೇರಿ ಜಿಲ್ಲೆಯ ಒಂದೂವರೆ ಎಕರೆ ಜಮೀನು ಮತ್ತು ಮನೆಯ ಆಸ್ತಿಗಾಗಿ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಲಗಿದ್ದ ವೇಳೆ ತಾಯಿಯ ಮುಖಕ್ಕೆ ದಿಂಬನ್ನು ಒತ್ತಿ ಉಸಿರುಗಟ್ಟಿಸಿ ಸುಧಾ ಕೊಲೆ ಮಾಡಿದ್ದಾಳೆ.

ಬಾಳೆಹೊನ್ನೂರು ಪೊಲೀಸರು ಸುಧಾಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.